ಉಡುಪಿ ಚಿನ್ನಾಭರಣ ಘಟಕದಲ್ಲಿ ರಾಸಾಯನಿಕ ಹೊಗೆ, ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೋಟೀಸ್ ಜಾರಿ

Spread the love

ಉಡುಪಿ ಚಿನ್ನಾಭರಣ ಘಟಕದಲ್ಲಿ ರಾಸಾಯನಿಕ ಹೊಗೆ, ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೋಟೀಸ್ ಜಾರಿ

ಉಡುಪಿ: ರಾಸಾಯನಿಕ ಹೊಗೆ ಹೊಸಸೂಸುವ ವಿಚಾರವಾಗಿ ಇಂದು ಉಡುಪಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಗರದ ಚಿನ್ನಾಭರಣ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು, ದೇವಾಲಯ, ಮಸೀದಿ, ಸರಕಾರಿ ಶಾಲೆ, ವಸತಿ ಸಮುಚ್ಛಯಗಳಿದ್ದು ಇಲ್ಲಿ ಹೊರ ಸೂಸುವ ರಾಸಾಯನಿಕ ಹೊಗೆಯಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು. ಈ ಹಿನ್ನೆಲೆ ಯಲ್ಲಿ ಮಾಹಿತಿ ಪಡೆದು ಬೆಳಗ್ಗೆ ಘಟಕಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಚಿನ್ನಾಭರಣ ಘಟಕ ತಯಾರಿಸುವ ಹಾಗೂ ಹೊಗೆ ಸೂಸುವ ಅಂತಸ್ತಿಗೆ ಹೋಗಿ ಪರಿಶೀಲನೆ ನಡೆಸಿ, ಮಾಹಿತಿ ಕಳೆ ಹಾಕಿದೆ.

ಈ ಬಗ್ಗೆ  ಮಾತನಾಡಿದ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ.ಕೆ.ಎಂ.ರಾಜು, ನಮ್ಮ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಇರುವ ಪೇಪರ್ಗಳನ್ನು ಸುಟ್ಟಿರು ವುದು ಕಂಡುಬಂದಿದೆ. ಈ ಸಂಬಂಧ ಅವರಿಗೆ ನೋಟೀಸ್ ನೀಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ


Spread the love