ಉಡುಪಿ: ಚುನಾವಣಾ ತರಬೇತಿ ತೆರಳುವ ಸಿಬ್ಬಂದಿಗೆ ಉಚಿತ ಬಸ್ ವ್ಯವಸ್ಥೆ

Spread the love

ಉಡುಪಿ: ಚುನಾವಣಾ ತರಬೇತಿ ತೆರಳುವ ಸಿಬ್ಬಂದಿಗೆ ಉಚಿತ ಬಸ್ ವ್ಯವಸ್ಥೆ

ಉಡುಪಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಕರ್ತವ್ಯಕ್ಕಾಗಿ ನೇಮಕ ಮಾಡಿರುವ ಪಿಆರ್‌ಓ, ಎಪಿಆರ್‌ಓ, ಪಿಓಗಳಿಗೆ ಮೇ 2 ರಂದು ನಡೆಯುವ ಕಾರ್ಯಾಗಾರಕ್ಕೆ ತೆರಳಲು ಜಿಲ್ಲಾಡಳಿತದ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೈಂದೂರಿನ ಶಿರೂರು ಗ್ರೀನ್ ವ್ಯಾಾಲಿ ಇಂಟರ್‌ನ್ಯಾಷನಲ್ ಸ್ಕೂಲ್, ಕುಂದಾಪುದ ಭಂಡಾಕರ್‌ಸ್‌ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಉಡುಪಿಯ ಸೈಂಟ್ ಸಿಸಿಲಿಸ್ ಸ್ಕೂಲ್ ಬ್ರಹ್ಮಗಿರಿ, ಕಾಪು ದಂಡತೀರ್ಥ ಪಿ.ಯು. ಕಾಲೇಜು, ಕಾರ್ಕಳದ ಕ್ರೈಸ್ಟ್‌ ಕಿಂಗ್ ಪಿ.ಯು. ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.

ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬಂದಿಗೆ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಲು ಉಚಿತ ಬಸ್ ವ್ಯವಸ್ಥೆಯನ್ನು ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಾಪ್ತಿಯಲ್ಲಿ ಮಾಡಲಾಗಿದೆ.

ತರಬೇತಿ ಕಾರ್ಯಾಗಾರ ಸ್ಥಳಗಳಿಗೆ ಪ್ರಯಾಣಿಸಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿದ್ದು, ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಮುಂದಿನಂತಿದೆ.

ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಭೀಮಪ್ಪ – 8105025695, ಕಾಂತರಾಜು -9482036207, ಶ್ರೀಶಾಂತ್ 9620428828,

ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಭಾಗ್ಯಲಕ್ಷ್ಮೀ 9481144043, ವಾಲೇಕರ್ 9341049161, ರಂಗರಾಜು 8197809032,

ಉಡುಪಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅಶ್ವಥ್ 9113042711, ಪುನೀತ್ 9036681599, ಜಗದೀಶ್ ಮುರನಾಳ 8310498064,

ಕಾಪು ಸರ್ವಿಸ್ ಬಸ್ ನಿಲ್ದಾಣದಲ್ಲಿ ಸುಧೀರ್ ಕುಮಾರ್ ಶೆಟ್ಟಿ 9008922727, ವಿಜಯಾ 9845162068, ಕ್ಲಾರೇನ್ಸ್ ಲೆಸ್ಟಾನ್ 8095101024,

ಕಾರ್ಕಳ ಬಂಡೀಮಠದಲ್ಲಿ ಮಂಜುನಾಥ ನಾಯ್ಕ್ 9880019100, ಮಹೇಶ್ ಕುಮಾರ್ 9741560924, ಆನಂದ ಬಿ., 9844111931.

ಮೇ 2 ರಂದು ಬೆಳಗ್ಗೆ 7 ಗಂಟೆಗೆ ನಿಗದಿತ ಸ್ಥಳದಿಂದ ಬಸ್‌ಗಳು ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.


Spread the love