
ಉಡುಪಿ ಜಯಂಟ್ಸ್ ಅಧ್ಯಕ್ಷ ಇಕ್ಬಾಲ್ ಮನ್ನಾ ಸಹಿತ ಪದಾಧಿಕಾರಿಗಳ ಪದಗ್ರಹಣ
ಉಡುಪಿ: ಉಡುಪಿಯ ಜಯಂಟ್ಸ್ ಗ್ರೂಪ್ 2023ನೇ ಸಾಲಿಗೆ ಪುನಾರಾಯ್ಕೆಗೊಂಡ ಅಧ್ಯಕ್ಷ ಇಕ್ಬಾಲ್ ಮನ್ನಾ ಸೇರಿದಂತೆ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭವು ಉಡುಪಿಯ ವುಡ್‌ಲ್ಯಾಂಡ್ಸ್ ಹೊಟೇಲಿನಲ್ಲಿ ಸೋಮವಾರ ಜರಗಿತು.
ಮುಖ್ಯ ಅತಿಥಿಯಾಗಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಕೇಂದ್ರ ಸಮಿತಿ ಸದಸ್ಯ ದಿನಕರ್ ಕೆ.ಅಮೀನ್ ಮಾತನಾಡಿದರು.
ಫೆಡರೇಶನ್ 6ರ ಘಟಕದ ನಿರ್ದೇಶಕ ವಾಸುದೇವ್ ಮಹಾಲೆ ಪದಗ್ರಹಣ ನೆರವೇರಿಸಿದರು.
ಫೆಡರೇಶನ್ ಮಾಜಿ ಅಧ್ಯಕ್ಷ ಜಯರಾಜ ಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿದರು. ಉದ್ಯಾವರ ಎಂಇಟಿ ಸ್ಕೂಲ್‌ನ ಮುಖ್ಯಸ್ಥೆ ಡಾ.ಜುನೈದಾ ಸುಲ್ತಾನ್, ಫೆಡರೇಶನ್ ಉಪಾಧ್ಯಕ್ಷ ತೇಜೇಶ್ವರ ರೋವಾ, ಫೆಡರೇಶನ್ ಸಂಯೋಜಕ ಲಕ್ಷ್ಮೀಕಾಂತ ಬೆಸ್ಕೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಾದ ವಿಶೇಷ ಮಕ್ಕಳ ಶಾಲೆಯ ದಿಲ್ದಾರ್ ಅಕ್ಬರ್, ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕಿ ಸುಷ್ಮಾ ಗೋಪಾಲಕೃಷ್ಣ, ವಕೀಲೆ ಬಿಂದು ತಾಂಕ್ಸ್‌ಪ್ಪನ್, ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯ ಶೈಲಾ ಅಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು.
ಉಡುಪಿಯ ಜಯಂಟ್ಸ್ ಗ್ರೂಪ್ ನೂತನ ಸಮಿತಿಯನ್ನೂ ರಚಿಸಲಾಯಿತು. ಯಶವಂತ್ ಸಾಲಿಯಾನ್ ಮತ್ತು ವಿನ್ಸೆಂಟ್ ಸಲ್ಡಾನಾ ಅವರನ್ನು ಉಪಾಧ್ಯಕ್ಷರ ನ್ನಾಗಿ ನೇಮಿಸಲಾಯಿತು. ಆಡಳಿತ ನಿರ್ದೇಶಕ ರೋಶನ್ ಬಲ್ಲಾಳ್, ಜಂಟಿ ಆಡಳಿತ ನಿರ್ದೇಶಕರಾದ ವಾದಿರಾಜ್, ಹಣಕಾಸು ನಿರ್ದೇಶಕ ಗಣೇಶ್ ಉರಾಳ್, ಜಂಟಿ ಹಣಕಾಸು ನಿರ್ದೇಶಕ ದಯಾನಂದ ಕಲ್ಮಾಡಿ, ನಿರ್ದೇಶಕರುಗಳಾಗಿ ಪ್ರಭಾಕರ ಬಂಗೇರ, ಲಿಯಾಕತ್ ಅಲಿ, ವಿನಯ್ ಕುಮಾರ್ ಪೂಜಾರಿ, ಜೀನತ್, ಗೀತಾ ರಾವ್ ಮತ್ತು ದಿವಾಕರ್ ಸನಿಲ್ ಪ್ರಮಾಣ ವಚನ ಸ್ವೀಕರಿಸಿದರು.
ರೋಶನ್ ಬಲ್ಲಾಳ್ ವಾರ್ಷಿಕ ವರದಿಯನ್ನು ಮಂಡಿಸಿದರು. ವಿವೇಕ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಸದಸ್ಯರು ಮತ್ತು ಸಭಿಕರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗಿತ್ತು.