ಉಡುಪಿ ಜಿಲ್ಲಾ ಆರ್ ಜಿ ಪಿ ಆರ್ ಎಸ್ ಸಂಘಟನೆಯಿಂದ ಸಂವಿಧಾನ ದಿನಾಚರಣೆ

Spread the love

ಉಡುಪಿ ಜಿಲ್ಲಾ ಆರ್ ಜಿ ಪಿ ಆರ್ ಎಸ್ ಸಂಘಟನೆಯಿಂದ ಸಂವಿಧಾನ ದಿನಾಚರಣೆ

ಉಡುಪಿ: ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಉಡುಪಿ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ದಿನಾಚರಣೆ ನಡೆಯಿತು.

ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಯಾವರ ನಾಗೇಶ್ ಕುಮಾರವರು ಸಂವಿಧಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕಿ ರೋಶ್ನಿ ಒಲಿವರ್ ವರು ಪಕ್ಷದ ಸಂಘಟನೆಯ ಕುರಿತು ಮಾತನಾಡಿದರು.

ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೇ ಲಿಯೋರವರು ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತಾರಾಜ್ ಸಂಘಟನೆಯ ಕಾರ್ಕಳ ಬ್ಲಾಕ್ ಸಂಯೋಜಕರಾಗಿ ನೇಮಕಗೊಂಡ ಜೋಯ್ಸ್ ಟೆಲ್ಲೀಸ್ ರವರಿಗೆ ಆದೇಶ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ, ಫಾದರ್ ವಿಲಿಯಮ್ ಮಾರ್ಟಿಸ್, ಕುಶಲ ಶೆಟ್ಟಿ, ಕೀರ್ತಿಶೆಟ್ಟಿ, ಅಮೃತ ಪೂಜಾರಿ, ಸುರೇಶಶೆಟ್ಟಿ ಆನಂದ ಪೂಜಾರಿ, ಸುದೀರ್, ಐರಿನ್ ಆಂದ್ರಾದೆ, ಶಬರಿಸ್, ಸುನೀಲ ಬಂಗೇರ, ಸುಗಂಧಿ ಶೇಖರ, ಚಂದ್ರವತಿ ಭಂಡಾರಿ, ಉದಯ, ತಾರಾ ಪಂಚಾಯತ್ ಸದಸ್ಯರುಗಳು ಹಾಗೂ ಸಂಯೋಜಕರು ಗಳು ಉಪಸ್ಥಿತರಿದ್ದರು.


Spread the love