
ಉಡುಪಿ ಜಿಲ್ಲಾ ಆರ್ ಜಿ ಪಿ ಆರ್ ಎಸ್ ಸಂಘಟನೆ ಕಾರ್ಯಕಾರಿ ಸಮಿತಿ ಸಭೆ
ಉಡುಪಿ: ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿಯ ಸಭೆ ಇಂದು ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೇಲಿಯೋ ಮಾತನಾಡಿ ಈಗಾಗಲೇ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಗೃಹಲಕ್ಷ್ಮೀ ಹಾಗೂ ಗೃಹ ಜ್ಯೋತಿ ಯೋಜನೆ ಹಾಗೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಅಂಶಗಳ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನವೇ ಗೃಹಜ್ಞೋತಿ ಯೋಜನೆ ಅಡಿ ಪ್ರತಿಮನೆಗೆ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗ್ರಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು ಪ್ರತಿಮನೆಯ ಯಜಮಾನಿಗೆ ತಿಂಗಳಿಗೆ 2000/- ರೂಪಾಯಿ ಹಣ ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಈ ಎಲ್ಲಾ ಯೋಜನೆಗಳನ್ನು ನಮ್ಮ ಸಂಘಟನೆಯ ಸಂಯೋಜಕರು ಪ್ರತಿ ಬೂತ್ ನ ಪ್ರತಿಮನೆ ಮನೆಗೂ ಹೋಗಿ ಜನರಿಗೆ ಈ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ಧ ಸಂಘಟನೆಯ ಎಲ್ಲಾ ಸಂಯೋಜಕರುಗಳು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಗ್ರಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಕುರಿತು ತಮ್ಮ ಸಂತಸ ಹಾಗೂ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ ಈ ಎರಡು ಯೋಜನೆಗಳ ಆಗತ್ಯ ಪ್ರತಿ ಕುಟುಂಬಕ್ಕೂ ಇದೆ ಎಂದು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಿದರು.
ಸಂಘಟನೆಯ ಬೈಂದೂರು ಬ್ಲಾಕ್ ನ ಸಹ ಸಂಯೋಜಕರು ಹಾಗೂ ಪಂಚಾಯತ್ ಸದಸ್ಯರಾಗಿರುವ ಆನಂದ ಎನ್ ಪೂಜಾರಿಯವರಿಗೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಹ ಸಂಯೋಜಕರನ್ನಾಗಿ ನೇಮಕ ಮಾಡಿ ಆದೇಶ ಪ್ರತಿಯನ್ನು ನೀಡಲಾಯಿತು.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬೂತ್ ಮಟ್ಟದಲ್ಲಿ ಸದ್ರಢಗೊಳಿಸುವ ಕುರಿತು ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿರುವ ಡಾ| ಸುನೀತ ಶೆಟ್ಟಿಯವರು ಸಭೆಗೆ ಮಾಹಿತಿ ನೀಡಿದರು.
ಕಳೆದ ಸಭೆಯ ವರದಿಯನ್ನು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯ ದರ್ಶೀ ಅಮೃತ ರವರು ಸಭೆಗೆ ನೀಡಿದರು.
ಜಿಲ್ಲಾ ಸಂಯೋಜಕಿ ರೋಶ್ಳಿ ಒಲಿವರ್ ವರು ನಮ್ಮ ಸಂಘಟನೆಯ ಸಂಯೋಜಕರು ಗಳ ಕರ್ತವ್ಯಗಳ ಹಾಗೂ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು. ಶಾಂತಿ ಪಿರೇರಾ ವರು ಎಲ್ಲರನ್ನು ಸ್ವಾಗತಿಸಿದರು. ಆನಂದ ಪೂಜಾರಿ ಧನ್ಯವಾದವಿತ್ತರು
ಸಭೆಯಲ್ಲಿ ಸಂಯೋಜಕರಾದ ಮೇರಿ ಡಿಸೋಜಾ, ಸತೀಶ ಜಪ್ತಿ, ರೋಶನ್ ಬೆರೆಟ್ಟೊ, ಸೂರ್ಯ ಸಾಲಿಯನ್ ,ಶಂಕರ ನಾಯಕ್, ಐರಿನ್ ಆಂದ್ರಾದೆ , ಸುರೇಶ ಶೆಟ್ಟಿ ಸುಧೀರ್ ನಾಯಕ್, ಚಂದ್ರಾವತಿ ಭಂಡಾರಿ ,ಸುಗಂಧಿ ,ರೋನಾಲ್ಡ್ , ರೋಸಲೀನ್, ಮಾರ್ಗ ರೇಟ್ ಸೀಮಾ ,ನಥಾಲಿಯ ಮಾರ್ಟಿಸ್, ನಜೀರ್ ,ಪ್ಲೋರಿನ್, ಉದಯ, ಪದ್ಮಾವತಿ ,ಅನಿಲ ಕುಮಾರ್ ಸದಾನಂದ ,ಸುರೇಂದ್ರ ,ಸುದೇಶ ಶೇಟ್ ರಹೀಂ ,ಜಾಕಿರ್ ಉಪಸ್ಥಿತರಿದ್ದರು.