
Spread the love
ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಉದಯ್ ಗಾಣಿಗ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಎಸ್ಪಿ ಗೆ ಮನವಿ
ಉಡುಪಿ: ಯಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಲ್ಲಿಯ ವರೆಗೆ ಪೋಲಿಸ್ ಇಲಾಖೆಯ ಉತ್ತಮ ಕೆಲಸಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ನಿಯೋಗ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.
ಈ ವೇಳೆ ಕೊಲೆ ಕೃತ್ಯದಲ್ಲಿ ಕೆಲವೊಂದು ಪ್ರಭಾವಿ ನಾಯಕರು ಕೂಡ ಸೇರಿದ್ದು ಅವರನ್ನೂ ಕೂಡ ಬಂಧಿಸುವಂತೆ ಒತ್ತಾಯಿಸಲಾಯಿತು. ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡ ಯಾವುದೇ ಒತ್ತಾಯಕ್ಕೆ ಮಣಿಯದೆ ಬಂಧಿಸಿ ತಕ್ಕ ಶಿಕ್ಷೆ ಸಿಗುವಂತೆ ಮತ್ತು ಉದಯ್ ಗಾಣಿಗ ಪತ್ನಿ ಮಕ್ಕಳು ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತನ್ನ, ರಮೇಶ್ ಗಾಣಿಗ, ರವಿ ಗಾಣಿಗ ಆಜ್ರಿ ಮತ್ತಿತರರು ಉಪಸ್ಥತರಿದ್ದರು.
Spread the love