
ಉಡುಪಿ ಜಿಲ್ಲಾ ಪ್ರಚಾರ ಸಮಿತಿಗೆ ಸಂಯೋಜಕರು ಹಾಗೂ ಜಂಟಿ ಸಂಯೋಜಕರ ನೇಮಕ
ಉಡುಪಿ: ಉಡುಪಿ ಜಿಲ್ಲಾ ಪ್ರಚಾರ ಸಮಿತಿಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರರಾದ ಅಲೆವೂರು ಹರೀಶ್ ಕಿಣಿಯವರ ಶಿಫಾರಸ್ಸಿನ ಮೇರೆಗೆಹಾಗೂ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ.ಬಿ. ಪಾಟೀಲ್ರವರ ಅನುಮೋದನೆಯೊಂದಿಗೆಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ “ಸಂಯೋಜಕರನ್ನು ಹಾಗೂ ಜಂಟಿ ಸಂಯೋಜಕ”ರನ್ನಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ.
ಜಿಲ್ಲಾ ಸಂಯೋಜಕರು
1 ಐಡಾ ಗಿಲ್ಬರ್ಟ್ ಡಿ’ಸೋಜಾ, ಮೂಡುಬೆಳ್ಳೆ
2 ಶ್ರೀಧರ್ ಕೆ.ಎಸ್., ಸಾಸ್ತಾನ
3 ಉದಯ್ಕುಮಾರ್, ಪದವು
4 ಜ್ಯೋತಿ ನಾಯ್ಕ್, ಅಂಪಾರು
5 ವಿಜಯ್ ಕುಮಾರ್ ಜೈನ್, ಈದು
ಜಿಲ್ಲಾ ಜಂಟಿ ಸಂಯೋಜಕರು
1 ಉಡುಪಿ- ಮೊಹಮ್ಮದ್ ರಫೀಕ್, ದೊಡ್ಡಣಗುಡ್ಡೆ
2 ಕಾಪು- ದಿನೇಶ್ ಸುವರ್ಣ, ಶಿರ್ವ
3 ಕಾರ್ಕಳ- ಅನಿಲ್ ಪೂಜಾರಿ, ಮಾಳ
4 ಕುಂದಾಪುರ- ಅನಿಲ್ ಶೆಟ್ಟಿ, ಮಂದಾರ್ತಿ
5 ಬೈಂದೂರು- ಅರವಿಂದ ಪೂಜಾರಿ, ಬೈಂದೂರು
ಈ ಕೂಡಲೇ ನೇಮಕಗೊಂಡ ಸಂಯೋಜಕರು ಹಾಗೂ ಜಂಟಿ ಸಂಯೋಜಕರು ಕಾರ್ಯೋನ್ಮುಖರಾಗಿ ತಮ್ಮ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆ, ಪಕ್ಷದ ತತ್ವ ಸಿದ್ಧಾಂತ, ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಜನರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಪ್ರಚಾರ ಮಾಡಲು ನಿರ್ದೇಶಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಅಧ್ಯಕ್ಷರಾದ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.