ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Spread the love

ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿ, ಕುಮಾರ ಕೃಪದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ನೆರವೇರಿಸಿದರು.

ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕಿ ನಮಗೆ 75 ವರ್ಷ ಮುಗಿದಿದ್ದು, ಅನೇಕ ಮಹನೀಯರು,ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದನ್ನುನಾವು ವಿಮರ್ಶೆ ಮಾಡಿ ನೋಡಬೇಕಾಗುತ್ತದೆ ಇನ್ನು 25 ಗಳಲ್ಲಿ ಶತಮಾನೋತ್ಸವ ಸಂಭ್ರಮ ಬರುತ್ತದೆ.

ನಾವೆಲ್ಲರೂ ಜಾತಿ, ಧರ್ಮ, ಪಕ್ಷ, ಮರೆತು ಭಾರತೀಯರು ಎಂಬ ರೀತಿಯಲ್ಲಿ ಒಗ್ಗಟ್ಟಾಗಿ ದೇಶದ ಬಗ್ಗೆ, ನಮ್ಮ ಊರಿನ ಬಗ್ಗೆ ಬೆಳವಣಿಗೆಯ ಬಗ್ಗೆ ಆಲೋಚನೆ ಮಾಡಬೇಕು. ರೋಟಿ,ಕಪಡ,ಮಖಾನ್, ಆರೋಗ್ಯ,ಶಿಕ್ಷಣ, ಎಲ್ಲ ಶ್ರೀಸಾಮಾನ್ಯರಿಗೆ ಸಿಕ್ಕಿದರೆ ಸ್ವಾತಂತ್ರ್ಯದ ನಿಜವಾದ ಅರ್ಥ ಸಿಗುತ್ತದೆ . ಬಡತನ, ಭ್ರಷ್ಟಾಚಾರ ಭಯೋತ್ಪಾದನೆ ನಿರ್ಮೂಲನಾ ಆಗಿ ನಿಜವಾದ ಸ್ವಾತಂತ್ರ ಜನಸಾಮಾನ್ಯರಿಗೆ ಸಿಗಲಿ ಎಂದು ಹಾರೈಸಿದರು

ಈ ಸಂದರ್ಭ ಪಕ್ಷ ನಾಯಕರುಗಳಾದ, ವಾಸುದೇವ ರಾವ್ ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಗಂಗಾಧರ ಬಿರ್ತಿ, ಶಾಲಿನಿ ಬಿ ಶೆಟ್ಟಿ ಕೆಂಚನೂರು, ಮನ್ಸೂರ್ ಇಬ್ರಾಹಿಂ, ಸಂಕಪ್ಪ. ಎ, ಚಂದ್ರಹಾಸ್ ಎಮ್ರಾಳು,ಉಮೇಶ್ ಕರ್ಕೇರ, ಸಂಜಯ್ ಕುಮಾರ್,ಇಕ್ಬಾಲ್ ಅತ್ರಾಡಿ, ಭರತ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆಚಾರ್ಯ, ಹುಸೇನ್ ಹೈಕಾಡಿ, ಎಂ ಎ ಬಾವು ಮೂಳೂರು, ಬಿಕೆ ಮೊಹಮ್ಮದ್, ರಾಮರಾವ್, ರಝಕ್ ಉಚ್ಚಿಲ, ರಂಗ ಎನ್ ಕೋಟ್ಯಾನ್, ಸರ್ಫಾಜ್ ಮಲ್ಲಾರು,ಹರೀಶ್ ಶೆಟ್ಟಿ, ರಶೀದ್ ಸರ್ಕಾರಿಗುಡ್ಡೆ, ಶ್ರೀಮತಿ ಸನಾ, ಪದ್ಮನಾಭ ಆರ್ ಕೋಟ್ಯಾನ್, ಸನವರ್ ಕಲೀಮ್, ಪೈಸೆಲ್ ಅಲೆವೂರು, ಆನೇಕ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು”.


Spread the love