ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೆಲಿನ್ ಕರ್ಕಡ ಅವರಿಗೆ ಶೃದ್ಧಾಂಜಲಿ

Spread the love

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸೆಲಿನ್ ಕರ್ಕಡ ಅವರಿಗೆ ಶೃದ್ಧಾಂಜಲಿ

ಉಡುಪಿ: ಇತ್ತೀಚೆಗೆ ನಿಧನರಾದ ಉಡುಪಿ ನಗರಸಭಾ ಸದಸ್ಯೆ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ  ಸೆಲಿನ್ ಕರ್ಕಡ ಅವರಿಗೆ ಕಾಂಗ್ರೆಸ್ ಭವನದಲ್ಲಿ ಇಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ  ಅಶೋಕ್ ಕುಮಾರ್ ಕೊಡವೂರು ಅವರು ಸೆಲಿನ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ನುಡಿನಮನಗೈಯ್ಯುತ್ತಾ ಸೆಲಿನ್ ಅವರು ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದು,ನಗರಸಭೆಯ ಸದಸ್ಯೆಯಾಗಿ ಸದಾ ಜನಸಾಮಾನ್ಯರ ಸೇವೆಯಲ್ಲಿ ತೊಡಗಿದವರು.ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ನೀಡುವುದರೊಂದಿಗೆ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ನುಡಿದರು.

ನಗರಸಭೆಯಲ್ಲಿ ಅವರು ಒಡನಾಡಿಯಾಗಿದ್ದು, ಬಹಳಷ್ಟು ಅನ್ಯೋನ್ಯವಾಗಿದ್ದ ಮಾಜಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ ಅವರು ತಮ್ಮ ಮತ್ತು ಸೆಲಿನ್ ಅವರ ನಡುವಿನ ಸ್ನೇಹವನ್ನು ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು.

ಮತ್ತೋರ್ವ ನಗರಸಭಾ ಸದಸ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ  ರಮೇಶ್ ಕಾಂಚನ್ ಹಾಗೂ ಪ್ರಸಾದ್ ರಾಜ್ ಕಾಂಚನ್ ಅವರೂ ಸೆಲಿನ್ ಅವರ ಗುಣಗಾನ ಮಾಡಿದರು .

ಸಭಾಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಗೀತಾ ವಾಗ್ಳೆ ಅವರು ಮಾತನಾಡುತ್ತಾ ಸೆಲಿನ್ ಅವರು ಒಬ್ಬ ಸ್ನೇಹಜೀವಿಯಾಗಿದ್ದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಸದಾ ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡೇ ಬಂದ ಅವರ ಧೈರ್ಯ ಯಾರೂ ಮೆಚ್ಚುವಂತದ್ದು.ಅವರ ಅಗಲಿಕೆ ಮಹಿಳಾ ಕಾಂಗ್ರೆಸ್ ಗೆ ದೊಡ್ಡ ನಷ್ಟವನ್ನುಂಟುಮಾಡಿದೆ.ಒಳ್ಳೆಯ ,ನಿಷ್ಟಾವಂತ ಕಾರ್ಯಕರ್ತೆಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಮೃತರಿಗೆ ಗೌರವ ಸೂಚಿಸಲಾಯಿತು.

ಸಭೆಯಲ್ಲಿ  ನಾಗೇಶ್ ಉದ್ಯಾವರ, ಜಿಲ್ಲಾ ಪ.ಘಟಕದ ಅಧ್ಯಕ್ಷ  ಜಯಕುಮಾರ್, ಉಡುಪಿ ನಗರಸಭಾ ಸದಸ್ಯೆ  ಅಮೃತಾ ಕೃಷ್ಣಮೂರ್ತಿ,ಮಾಜಿ ಉಪಾಧ್ಯಕ್ಷೆ  ಸಂಧ್ಯಾ ತಿಲಕರಾಜ್, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ  ಚಂದ್ರಿಕಾ ಶೆಟ್ಟಿ, ಜಯಶ್ರೀ ಶೇಟ್, ಪ್ರಮೀಳಾ,ಹೆಲೆನ್ ಪೆರಂಪಳ್ಳಿ, ತಾರಾ,ಸುಂದರಿ,ವಜ್ರಾಕ್ಷಿ,ಕುಮುದಾ,ಆಶಾ ಚಂದ್ರಶೇಖರ್, ಗ್ರಾಮ ಪಂಚಾಯತ್ ಸದಸ್ಯರಾದ  ಸುಕನ್ಯಾ ಕಡೆಕಾರ್, ಸರಸ್ವತಿ ಕಡೆಕಾರ್, ರಮಾದೇವಿ,ಅಮಿತಾ, ಗೀತಾ,ಮರೀನಾ ,ಸಂಜಯ್ ಆಚಾರ್ಯ,ಪ್ರಭಾಕರ ಆಚಾರ್ಯ, ಮಾಲತಿ ದೇವರಾಜ್,  ತಿಲಕರಾಜ್,ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷೆ  ಜ್ಯೋತಿ ಹೆಬ್ಬಾರ್ ಅವರು ಕಾರ್ಯಕ್ರಮ ನಿರೂಪಿಸಿದರು.


Spread the love