ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ  ವಿಶ್ವಾಸ್ ವಿ ಅಮೀನ್ ಆಯ್ಕೆ

Spread the love

ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ  ವಿಶ್ವಾಸ್ ವಿ ಅಮೀನ್ ಆಯ್ಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ   ಡಿ ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ,  ವಿನಯ ಕುಮಾರ್ ಸೊರಕೆ ಹಾಗು ಉಡುಪಿ ಜಿಲ್ಲಾ ಕಾಂಗ್ರೇಸ್ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅತ್ಯಕ್ಷರಾದ ಮಂಜುನಾಥ್ ಭೀ ಸುಣಗಾರ ರವರು ನೇಮಕಾತಿಯನ್ನು ಅನುಮೋದಿಸಿರುತ್ತಾರೆ.

ಕಾಪು ರಾಜೀವ್ ಭವನದಲ್ಲಿ  ಮಂಜುನಾಥ್ ಭೀ ಸುಣಗಾರ ಹಾಗು  ವಿನಯಕುಮಾರ್ ಸೊರಕೆಯವರು ಆದೇಶ ಪತ್ರವನ್ನು ನೀಡಿದರು.

ಈ ಸಂಧರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ,ಕೆಪಿಸಿಸಿ ಕಾರ್ಯದರ್ಶಿಗಳಾದ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಮೀನುಗಾರರ ಕಾಂಗ್ರೆಸ್ ಘಟಕದ ಜಂಟಿ ಕಾರ್ಯದರ್ಶಿಗಳಾದ ಅಖಿಲೇಶ್ ಕೋಟ್ಯಾನ್, ರಮೇಶ್ ಎಸ್ ತಿಂಗಳಾಯ, ರಾಜೇಶ್ ಮೆಂಡನ್,ಯೋಗೀಶ್ ಶಿರೂರು, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಹಮ್ಮದ್ ಇಮ್ರಾನ್ ರವರು ಉಪಸ್ಥಿತರಿದ್ದರು.


Spread the love