ಉಡುಪಿ ಜಿಲ್ಲಾ ರಜತ ಮಹೋತ್ಸವ ಲಾಂಛನ ವಿನ್ಯಾಸಕ್ಕಾಗಿ ಕರೆ

Spread the love

ಉಡುಪಿ ಜಿಲ್ಲಾ ರಜತ ಮಹೋತ್ಸವ ಲಾಂಛನ ವಿನ್ಯಾಸಕ್ಕಾಗಿ ಕರೆ

ಉಡುಪಿ: ಜಿಲ್ಲೆ ಆರಂಭಗೊಂಡು 25 ವಸಂತಗಳ ಹಿನ್ನಲೆಯಲ್ಲಿ , ರಜತ ಮಹೋತ್ಸವ ಕಾರ್ಯಕ್ರಮವು ಆಗಸ್ಟ್‌ 25 ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡಯಲಿದ್ದು, ರಜತ ಮಹೋತ್ಸವ ಕಾರ್ಯಕ್ರಮದ ಅಂದವಾದ ಲಾಂಛನವನ್ನು, ಟ್ಯಾಗ್ಲೈನ್‌ ನೊಂದಿಗೆ ರಚಿಸಿ, ಜಿಲ್ಲಾಡಳಿತಕ್ಕೆ ನೀಡಲು ಸಾರ್ವಜನಿಕರಿಂದ ಲಾಂಛನ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕರು ರಚಿಸಿದ ಅತ್ಯುತ್ತಮ ಒಂದು ಲಾಂಛನವನ್ನು ಆಯ್ಕೆ ಮಾಡಿಕೊಳ್ಳಲಾಗುವುದು , ಆಯ್ಕೆಯಾದ ಲಾಂಛನಕ್ಕೆ ರೂ.10000 (ರೂಪಾಯಿ ಹತ್ತು ಸಾವಿರಗಳು) ಗಳ ಬಹುಮಾನ ನೀಡಲಾಗುವುದು.

ಲಾಂಛನವನ್ನು ಜಿಲ್ಲಾಧಿಕಾರಿ ಕಛೇರಿಯ ಈಮೇಲ್‌ ವಿಳಾಸ dcudu-rd-ka@nic.in ಕ್ಕೆ ಆಗಸ್ಟ್‌ 16 ರೊಳಗೆ ನೀಡಲು ಕೋರಲಾಗಿದೆ.


Spread the love