ಉಡುಪಿ ಜಿಲ್ಲೆಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸದಸ್ಯ ನೀಡಬೇಕು-ಪವನ್ ಕುಮಾರ್ ಶಿರ್ವ

Spread the love

ಉಡುಪಿ ಜಿಲ್ಲೆಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸದಸ್ಯ ನೀಡಬೇಕು-ಪವನ್ ಕುಮಾರ್ ಶಿರ್ವ

ಉಡುಪಿ:  ಜಿಲ್ಲೆಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸದಸ್ಯ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಪವನ್‌ ಕುಮಾರ್‌ ಶಿರ್ವ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ಕರ್ನಾಟಕದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ನಿಯಮಿತವಿದ್ದು ಅದರಲ್ಲಿ ಕೆಲವು ಸದಸ್ಯರಿದ್ದು ಕೆಲವು ಸದಸ್ಯರ ಆಯ್ಕೆ ಖಾಲಿ ಇದೆ ಹಾಗೂ ಅಧ್ಯಕ್ಷರ ಆಯ್ಕೆ ಕೂಡ ಆಗಲಿಲ್ಲ. ಆದ ಕಾರಣ ಇಲ್ಲಿಯ ಜನರಿಗೆ ಯಾವುದೇ ಸವಲತ್ತುಗಳನ್ನು ತೆಗೆದುಕೊಳ್ಳಬೇಕಾದರೆ ಸರಿಯಾದ ಮಾಹಿತಿ ಸಿಗುದಿಲ್ಲ.

ಯಾವುದಾದರೂ ಸವಲತ್ತುಗಳನ್ನು ಪಡೆಯಲು ಹೋದರೆ ಯಾವುದು ಸವಲತ್ತು ಇರುವುದಿಲ್ಲ ಹಾಗೆಯೇ ಸವಲತ್ತುಗಳು ಇದ್ದರೂ ತಾಲೂಕಿಗೆ ಒಂದು ವ್ಯಕ್ತಿಗೆ ನೀಡುವುದು ಇದೆಲ್ಲ ಸರಿಯಾದ ಕ್ರಮವಲ್ಲ. ಯಾಕೆಂದರೆ ತಾಲೂಕಿನಲ್ಲಿ ತುಂಬಾ ಜನರಿರುವಾಗ ಒಬ್ಬರನ್ನು ಆಯ್ಕೆ ಮಾಡಿ ಅಯ್ಕೆ ಆದವರಿಗೂ ಸರಿಯಾದ ಸವಲತ್ತು ಸಿಗುವುದಿಲ್ಲ ಆದ್ದರಿಂದ ಸರ್ಕಾರ ಉಡುಪಿ ಜಿಲ್ಲೆಗೆ ಭೋವಿ ಅಭಿವೃದ್ಧಿ ನಿಗಮಕ್ಕೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ಅವರು ಒತ್ತಾಯಿಸಿದ್ದಾರೆ.


Spread the love