
Spread the love
ಉಡುಪಿ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯು ಅನುಷ್ಠಾನಗೊಂಡಿದ್ದು, 193 ಗ್ರಾಮ ಒನ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 25 ಪಂಚಾಯತ್ ವ್ಯಾಪ್ತಿಗಳಾದ ಹಾರಾಡಿ, ಚಾಂತಾರು, ವರಂಗ, ಬಡಾ, ಕಟಪಾಡಿ, ಪಡುಬಿದ್ರಿ, ಶಿರ್ವ, ಬೆಳ್ಮಣ್, ಬಸ್ರೂರು, ನಿಟ್ಟೆ, ಕುಕ್ಕುಂದೂರು, ಕಾಳಾವರ, ಅಮಾಸೆಬೈಲು, ಕೋಟೇಶ್ವರ, ಗಂಗೊಳ್ಳಿ, ತೆಂಕನಿಡಿಯೂರು, ಪೆರ್ಡೂರು, ಅಲೆವೂರು, ಉದ್ಯಾವರ, ಆರೂರು, ಕಾಂತಾವರ, ನಂದಳಿಕೆ, ಶಿರ್ಲಾಲು, ಯಡಮೊಗೆ ಹಾಗೂ ಬಳ್ಕೂರು ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು, ಸದರಿ ಬಾಕಿ ಕೇಂದ್ರಗಳ ಫ್ರಾಂಚೈಸಿ ಪಡೆಯಲು ಅರ್ಹ ಆಸಕ್ತ ಸಾರ್ವಜನಿಕರಿಂದ ವೆಬ್‍ಸೈಟ್ https://www.karnatakaone.gov.in/Public/GramOneFranchiseeTerms ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Spread the love