Home Mangalorean News Kannada News ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ – 12 ಮಂದಿ ಬಂಧನ

ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ – 12 ಮಂದಿ ಬಂಧನ

Spread the love

ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ – 12 ಮಂದಿ ಬಂಧನ

ಉಡುಪಿ: ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಟ್ಕಾ ಪ್ರಕರಣದಲ್ಲಿ ಬಂದಿತನಾದ ಮಟ್ಕಾ ಬುಕ್ಕಿಯ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, 12 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಬಂಧಿತರ ವಿವರ ಇಂತಿದೆ
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯಡ್ಕ ನಿವಾಸಿ, ಪ್ರಕಾಶ್ ಮೂಲ್ಯ (43), ಕೊಡವೂರು ನಿವಾಸಿ ರತ್ನಾಕರ ಅಮೀನ್, (48), ಮಣಿಪಾಲ ಠಾಣಾ ವ್ಯಾಪ್ತಿಯ ಬಡಗಬೆಟ್ಟು ನಿವಾಸಿ ನಾಗೇಶ್ಹ (56), ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಕಡ ನಿವಾಸಿ ವಿಜಯ ನಾಯರಿ (50), ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪೇತ್ರಿ ನಿವಾಸಿ ದಿವಾಕರ ಪೂಜಾರಿ (42), ಮೂಡನಿಡಂಬೂರು ನಿವಾಸಿ ರಾಮರಾಜ್ (44), ಕುಂಜಿಬೆಟ್ಟು ನಿವಾಸಿ ಜಗದೀಶ್ (39), ಅಂಬಾಗಿಲು ನಿವಾಸಿ ಚಿದಾನಂದ (35), ಕೊಡವೂರು ನಿವಾಸಿ ತಿಪ್ಪೆಸ್ವಾಮಿ (52), ಸಂತೆಕಟ್ಟೆ ನಿವಾಸಿ ರಾಘವೇಂದ್ರ (41), ಉಡುಪಿ ನಿವಾಸಿ ಉದಯ ಎಸ್ ಭಂಡಾರ (45) ಮತ್ತು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಚ್ಚಿಲ ನಿವಾಸಿ ಮನೋಜ್ ಕುಮಾರ್ ಅವರುಗಳನ್ನು ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿನ ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರವಿವಾರ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಪ್ರಕರಣದಲ್ಲಿ ಬಂಧಿತನಾದ ಮಟ್ಕಾ ಬುಕ್ಕಿ ಲಿಯೋ ಕರ್ನೆಲಿಯೋ ನೀಡಿದ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

Exit mobile version