ಉಡುಪಿ: ಜಿಲ್ಲೆಯಲ್ಲಿ ಮತ್ತೆ ಏರಿದ ಕೊರೋನಾ – 66 ಮಂದಿಗೆ ಪಾಸಿಟಿವ್

Spread the love

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಏರಿದ ಕೊರೋನಾ – 66 ಮಂದಿಗೆ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೋನಾ ಸ್ಪೋಟವಾಗಿದ್ದು, ಶನಿವಾರ ಒಟ್ಟು 66 ಮಂದಿಗೆ ಕೊರೋನಾ ಪಾಸಿಟಿವ್ ಧೃಡಗೊಂಡಿದೆ.

ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 66 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು ಅದರಲ್ಲಿ ಮಣಿಪಾಲದ ಎಂಐಟಿ ಕ್ಯಾಂಪಸ್ ನ 42 ಮಂದಿ ಗೆ ಕೊರೋನಾ ದೃಢಗೊಂಡಿದೆ. ಈವರೆಗೆ ಎಂಐಟಿ ಕ್ಯಾಂಪಸ್ ನ ಒಟ್ಟು 154 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಮಣಿಪಾಲ ಕ್ಯಾಂಪಸ್ ನ 1300 ಮಂದಿಯ ಗಂಟಲದ್ರವ ವರದಿ  ನಾಳೆ ಬರುವ ನಿರೀಕ್ಷೆ ಇದೆ.


Spread the love