ಉಡುಪಿ ಜಿಲ್ಲೆಯಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆ – ಜನಜೀವನ ಅಸ್ತವ್ಯಸ್ಥ

Spread the love

ಉಡುಪಿ ಜಿಲ್ಲೆಯಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆ – ಜನಜೀವನ ಅಸ್ತವ್ಯಸ್ಥ

ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿದ್ದ ತಾಪಮಾನಕ್ಕೆ ಬುಧವಾರ ಸಂಜೆ ಸುರಿದ ಭಾರಿ ಮಳೆ ತಂಪು ನೀಡಿದೆ.

ಬುಧವಾರ ಬೆಳಿಗ್ಗಿನಿಂದಲೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಸಂಜೆ ಭಾರಿ ಸಿಡಿಲು ಮಿಂಚು ಸಹಿತ ಭಾರಿ ಮಳೆಯಾಗಿದೆ. ಅನೀರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ಕತ್ತಲೆ ಕವಿಯುತ್ತಿದ್ದಂತೆ ಆರಂಭವಾದ ಅಕಾಲಿಕ ಮಳೆಯಿಂದಾಗಿ ಉಡುಪಿಯ ನಾಗರಿಕರು ಬೆಚ್ಚಿಬಿದ್ದಿದ್ದು, ಈ ಮಳೆಯಿಂದಾಗಿ ಕೃಷಿಗೂ ಕೂಡ ಆಪತ್ತು ಕಾದಿದೆ.

ಭಾರಿ ಸಿಡಿಲು ಮತ್ತು ಮಿಂಚು ಬಂದ ಪರಿಣಾಮ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯವಾಗಿದೆ.


Spread the love