ಉಡುಪಿ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ – ಭಾನುವಾರ 340 ಮಂದಿಗೆ ಪಾಸಿಟಿವ್‌

Spread the love

ಉಡುಪಿ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ – ಭಾನುವಾರ 340 ಮಂದಿಗೆ ಪಾಸಿಟಿವ್‌

ಉಡುಪಿ : ಜಿಲ್ಲೆಯಲ್ಲಿ ಶನಿವಾರ ಒಟ್ಟು 340 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ದೃಡಪಟ್ಟಿದೆ. ಸೋಂಕಿನಿಂದ ಸಕ್ರಿಯರಾಗಿ ರುವವರ ಸಂಖ್ಯೆಯೂ 979ಕ್ಕೇರಿದೆ. ದಿನದಲ್ಲಿ 77 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಪಾಸಿಟಿವ್ ಬಂದ 340 ಮಂದಿಯಲ್ಲಿ 176 ಮಂದಿ ಪುರುಷರಾದರೆ 164 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 262 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 29 ಮಂದಿ ಹಾಗೂ ಕಾರ್ಕಳ ತಾಲೂಕಿನ 49 ಮಂದಿಯೂ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಈ ಮೂಲಕ ಸೋಂಕು ಜಿಲ್ಲೆಯಾದ್ಯಂತ ವೇಗವಾಗಿ ಹರಡುವ ಸೂಚನೆ ಸಿಕ್ಕಿದೆ.

ಜಿಲ್ಲೆಯಲ್ಲಿ ಸದ್ಯ ಜಿಲ್ಲೆಯ ಪಾಸಿಟಿವಿಟಿ ರೇಟ್ 3.85 ಶೇ. ದಾಖಲಾಗಿದೆ.


Spread the love