ಉಡುಪಿ ಜಿಲ್ಲೆಯಲ್ಲಿ ಶತಕ ದಾಟಿದ ಕೋರೊನಾ – ಶುಕ್ರವಾರ‌ 148 ಮಂದಿಗೆ ಪಾಸಿಟಿವ್

Spread the love

ಉಡುಪಿ ಜಿಲ್ಲೆಯಲ್ಲಿ ಶತಕ ದಾಟಿದ ಕೋರೊನಾ – ಶುಕ್ರವಾರ‌ 148 ಮಂದಿಗೆ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 148 ಮಂದಿಗೆ ಕೊರೋನಾ ಪಾಸಿಟವ್‌ ಪತ್ತೆಯಾಗುವುದರೊಂದಿಗೆ ಶತಕ ದಾಟಿದೆ

ಗುರುವಾರ 92 ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ದಿನದಲ್ಲಿ 17 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಪಾಸಿಟಿವ್ ಬಂದ148 ಮಂದಿಯಲ್ಲಿ 71 ಮಂದಿ ಪುರುಷರಾದರೆ 77 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 125 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ 14 ಮಂದಿ ಕಾರ್ಕಳ ತಾಲೂಕಿನವರು. ಉಳಿದ 9 ಕುಂದಾಪುರ ತಾಲೂಕಿಗೆ ಸೇರಿದರು.


Spread the love