ಉಡುಪಿ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರಗೆ 73.75 % ಮತದಾನ

Spread the love

ಉಡುಪಿ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರಗೆ 73.75 % ಮತದಾನ

ಉಡುಪಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಒಟ್ಟು 73.75% ಮತದಾನವಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 71.83%, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 75.61%, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 71.26%, ಕಾಪು ವಿಧಾನಸಭಾ ಕ್ಷೇತ್ರದಲ್ಲಿ 71.16%, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 75.54% ಮತದಾನವಾಗಿರುತ್ತದೆ.

ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರಗೆ 47.79 % ಮತದಾನ

ಉಡುಪಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು 47.79 % ಮತದಾನವಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ   45.43%, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ  49.50%, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 46.49%,  ಕಾಪು ವಿಧಾನಸಭಾ ಕ್ಷೇತ್ರದಲ್ಲಿ  49%, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ   49.13%  ಮತದಾನವಾಗಿರುತ್ತದೆ.

ಉಡುಪಿ ಜಿಲ್ಲೆಯಲ್ಲಿ 11 ಗಂಟೆಯವರಗೆ 30.26% ಮತದಾನ

ಉಡುಪಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯಲ್ಲಿ 11 ಗಂಟೆಯವರೆಗೆ ಒಟ್ಟು 30.26% ಮತದಾನವಾಗಿದೆ.

 

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ   27.06%, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ  32.14%, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 29.44 %,  ಕಾಪು ವಿಧಾನಸಭಾ ಕ್ಷೇತ್ರದಲ್ಲಿ  28.5%, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ   32.7%  ಮತದಾನವಾಗಿರುತ್ತದೆ.

ವಿಧಾನಸಭೆ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಮತದಾನ ಆರಂಭ

ಉಡುಪಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮತ್ತು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಕುಟುಂಬ ಸಮೇತರಾಗಿ ಬಂದು ಅಜ್ಜರಕಾಡು ಉಡುಪಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಬೆಳಿಗ್ಗೆ ಮತದಾನ ಮಾಡಿದರು.

ಜಿಲ್ಲೆಯಲ್ಲಿ 5,02,836 ಪುರುಷ, 5,38,823 ಮಹಿಳಾ ಮತದಾರರಲ್ಲದೇ 13 ಇತರ ಮತದಾರರೊಂದಿಗೆ ಒಟ್ಟು 243 ಸೇವಾ ಮತದಾರರು ಅಂದು ತಮ್ಮ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದವರು ತಿಳಿಸಿದರು.

ಬೈಂದೂರು ಕ್ಷೇತ್ರದಲ್ಲಿ 1,15,346 ಪುರುಷ, 1,20,319 ಮಹಿಳೆ, 3 ಇತರ ಹಾಗೂ 48 ಸೇವಾ ಮತದಾರರು ಸೇರಿದಂತೆ ಒಟ್ಟು 2,35,716 ಮತದಾರರಿದ್ದಾರೆ. ಕುಂದಾಪುರ ಕ್ಷೇತ್ರದಲ್ಲಿ 1,00,751 ಪುರುಷ, 1,08,784 ಮಹಿಳಾ, 2 ಇತರ ಹಾಗೂ 55 ಸೇವಾ ಮತದಾರರು ಸೇರಿ ಒಟ್ಟು 2,09,592 ಮತದಾರರಿದ್ದಾರೆ.

ಉಡುಪಿ ಕ್ಷೇತ್ರದಲ್ಲಿ 1,04,787 ಪುರುಷ, 1,12,148 ಮಹಿಳೆ, 3 ಇತರ ಹಾಗೂ 51 ಸೇವಾ ಮತದಾರರು ಸೇರಿ ಒಟ್ಟು 2,16,989 ಮತದಾರರು, ಕಾಪು ಕ್ಷೇತ್ರದಲ್ಲಿ 90,517 ಪುರುಷ, 98,430 ಮಹಿಳೆ, 5 ಇತರೆ, 55 ಸೇವಾ ಮತದಾರರು ಸೇರಿ ಒಟ್ಟು 1,89,007 ಮತದಾರರು ಹಾಗೂ ಕಾರ್ಕಳ ಕ್ಷೇತ್ರದಲ್ಲಿ 91,435 ಪುರುಷ, 99,142 ಮಹಿಳೆ, 0 ಇತರೆ, 34 ಸೇವಾ ಮತದಾರರು ಸೇರಿ ಒಟ್ಟು 1,90,611 ಮತದಾರರಿದ್ದಾರೆ.


Spread the love

Leave a Reply

Please enter your comment!
Please enter your name here