ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 29 ರಿಂದ ಚುನಾವಣಾ ನೀತಿ ಸಂಹಿತೆ ಜಾರಿ – ಜಿಲ್ಲಾಧಿಕಾರಿ ಕೂರ್ಮರಾವ್

Spread the love

ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 29 ರಿಂದ ಚುನಾವಣಾ ನೀತಿ ಸಂಹಿತೆ ಜಾರಿ – ಜಿಲ್ಲಾಧಿಕಾರಿ ಕೂರ್ಮರಾವ್

ಉಡುಪಿ: ಭಾರತ ಚುನಾವಣಾ ಆಯೋಗ ದಿನಾಂಕ 29-03-2023ರಂದು ಹೊರಡಿಸಿದ ಆದೇಶದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ – 2023 ರ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು ಈ ದಿನಾಂಕ 29-03-2023 ರಿಂದ ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುತ್ತದೆ. ಈ ಸಂಬಂಧ ಉಡುಪಿ ಜಿಲ್ಲೆಯ್ಯಾದಂತ ದಿನಾಂಕ: 29-03-2023 ರಿಂದ 15-05-2023 ವರೆಗೆ ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಮ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 5 ವಿಧಾನ ಸಭಾ ಕ್ಷೇತ್ರಗಳಿದ್ದು ಒಟ್ಟು 1029678 ಮತದಾರರಿದ್ದು ಅದರಲ್ಲಿ 496863 ಪುರುಷ 532795 ಮಹಿಳಾ ಹಾಗೂ 20 ತೃತೀಯ ಲಿಂಗಿ ಮತದಾರರನ್ನು ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 17927 ಯುವ ಮತದಾರರಿದ್ದು ಪಿಡಬ್ಲ್ಯೂಡಿ ಮತದಾರರು 11751 ಹೊಂದಿದೆ. ಒಟ್ಟು 31268 ಮಂದಿ 80 ವರ್ಷ ಮೇಲ್ಪಟ್ಟ ಮತದಾರರಿದ್ದು, 1111 ಮತಗಟ್ಟೆಗಳಿವೆ ಎಂದರು.

ನಾಮಪತ್ರ ಸ್ವೀಕರಿಸಲು ತಾಲೂಕು ಆಡಳಿತ ಸೌಧ ಬೈಂದೂರು, ಸಹಾಯಕ ಆಯುಕ್ತರ ಕಚೇರಿ ಕುಂದಾಪುರ, ತಾಲೂಕು ಆಡಳಿತ ಸೌಧ ಉಡುಪಿ, ಕಾಪು ಹಾಗೂ ಕಾರ್ಕಳದಲ್ಲಿ ಅವಕಾಶವಿದೆ. ಬೈಂದೂರು ಚುನಾವಣಾಧಿಕಾರಿಯಾಗಿ ಜಗದೀಶ್ ಗಂಗಣ್ಣಗನವರ್, ಕುಂದಾಪುರಕ್ಕೆ ರಶ್ಮೀ ಎಸ್ ಆರ್, ಉಡುಪಿಗೆ ಸೀತಾ ಎಂ ಸಿ, ಕಾಪುವಿಗೆ ಪಿಕೆ ಬಿನೋಯಿ ಮತ್ತು ಕಾರ್ಕಳ ಕ್ಷೇತ್ರಕ್ಕೆ ಮದನ್ ಮೋಹನ್ ಸಿ ಅವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.

ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಯಾವುದೇಸಭೆಸಮಾರಂಭಗಳು, ಧಾರ್ಮಿಕಕಾರ್ಯಕ್ರಮಗಳು, ರಾಜಕೀಯಸಭೆ, ಪ್ರಚಾರಸಭೆ ಇತ್ಯಾದಿ ನಡೆಸಲು ಸಾರ್ವಜನಿಕರು / ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳು / ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬಹುದಾಗಿದೆ. ಪ್ರತಿ ವಿಧಾನ ಸಭಾಕ್ಷೇತ್ರವಾರು Flying Squad Team, Static SurveillanceTeam, Video Surveillance Team ಗಳನ್ನುರಚಿಸಿ, ಈ ತಂಡಗಳಿಗೆ ಅಧಿಕಾರಿ / ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ ಹಾಗೂ ಜಿಲ್ಲೆಯಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಲಿಖಿತವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ದೂರು ದಾಖಲಿಸಲು ಅನುಕೂಲಕ್ಕಾಗಿ ಈ ಕೆಳಗೆ ತಿಳಿಸಿರುವಂತೆ ತಂಡಗಳನ್ನು ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ರಚಿಸಲಾಗಿದೆ ಎಂದರು.

ಅಲ್ಲದೇ ಉಡುಪಿ ಜಿಲ್ಲಾಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಇದರ ದೂರವಾಣಿನಂಬ್ರ: 1950 ಟೋಲ್ ಪ್ರೀ ನಂಬರ್ ಅಥವಾ ( 0820-2574991) ಈ ಕಂಟ್ರೋಲ್ ರೂಮ್ ಗೆ ದಿನದ 24 ಗಂಟೆಗಳು ಕಾರ್ಯಚರಣೆ ನಡೆಸುತ್ತಿದ್ದು ಚುನಾವಣೆಗೆ ಸಂಬಂದಿಸಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡು ಬಂದಲ್ಲಿ ಈ ಕಂಟ್ರೋಲ್ ರೂಮ್ ಗೆ ದೂರು ನೀಡಬಹುದು ಹಾಗೂ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು.

ಈ ಬಾರಿ ಸಾರ್ವಜನಿಕರು ಚುನಾವಣಾ ಸಂಬಂಧಿತ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗವು C-VIGILMOBILE APPನ್ನು ಅಭಿವೃದ್ಧಿಪಡಿಸಲಾಗಿದೆ. ಈ App ಮೂಲಕ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೋಟೋ ಹಾಗೂ ವಿಡಿಯೋಗಳ ಮುಖಾಂತರ ದೂರುಗಳನ್ನು ದಾಖಲಿಸಬಹುದಾಗಿದೆ.

ಈ ಬಾರಿ 80 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಗತ್ಯ ವರ್ಗಗಳಿಗೆ ಅಂಚೆ ಮತ ಪತ್ರ ಸೌಲಬ್ಯ ಒದಗಿಸುವ ಸಂಬಂಧ ನೋಡೆಲ್ ಅಧಿಕಾರಿಯನ್ನಾಗಿ ಅಪರ ಜಿಲ್ಲಾಧಿಕಾರಿಗಳು ಉಡುಪಿ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಈ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಜರಗಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಉಪಸ್ಥೀತರಿದ್ದರು.


Spread the love