
Spread the love
ಉಡುಪಿ ಜಿಲ್ಲೆಯ ಎಲ್ಲಾ ದೇವಸ್ಥಾನದ ಜಾತ್ರೆಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಡಿ – ವಿಹಿಂಪ
ಉಡುಪಿ: ಜಿಲ್ಲೆಯ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವ ಗಳಲ್ಲಿ ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡಬಾರದಾಗಿ ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ
ಈ ದೇಶದ ಸಂವಿಧಾನಕ್ಕೆ ಬೆಲೆ ಕೊಡದ, ಈ ನೆಲದ ಕಾನೂನನ್ನು ಗೌರವಿಸದ ಮತ್ತು ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಪದೇ ಪದೇ ಅವಹೇಳನ ಗೈಯುವ ಮತಾಂಧರಿಗೆ ಉಡುಪಿ ಜಿಲ್ಲೆಯ ಯಾವುದೇ ದೇವಸ್ಥಾನ ಮತ್ತು ದೈವಸ್ಥಾನಗಳ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸುತ್ತದೆ ಕಾಪು, ಪಡುಬಿದ್ರೆ ಪೆರ್ಡೂರು, ಪೆರ್ಣಂಕಿಲ ದೇವಸ್ಥಾನಗಳಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ವಾಗತಿಸುತ್ತದೆ.. ಇದೇ ನಿರ್ಧಾರವನ್ನು ಜಿಲ್ಲೆಯ ದೇವಸ್ಥಾನಗಳ ಆಡಳಿತ ಮಂಡಳಿಗಳು ಮುಂದುವರಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ
Spread the love