ಉಡುಪಿ ಜಿಲ್ಲೆಯ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣಾ ಫಲಿತಾಂಶ ಪ್ರಕಟ

Spread the love

ಉಡುಪಿ ಜಿಲ್ಲೆಯ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣಾ ಫಲಿತಾಂಶ ಪ್ರಕಟ

ಉಡುಪಿ: ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಅಧ್ಯಕ್ಷರುಗಳ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಬ್ಲಾಕ್ ಗಳ  ಯುವ ಕಾಂಗ್ರೆಸ್ ಅಧ್ಯಕ್ಷರುಗಳ ಫಲಿತಾಂಶಗಳು ಪ್ರಕಟವಾಗಿದೆ.

ಚುನಾವಣೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಯೋಗಿಶ್ ಆಚಾರ್ಯ ಇನ್ನಾ, ಉಡುಪಿ ಬ್ಲಾಕಿಗೆ ರವಿರಾಜ್ ಕುಮಾರ್, ಬ್ರಹ್ಮಾವರ ಬ್ಲಾಕ್ ಗೆ ಗುರುಪ್ರಸಾದ್ ಶೆಟ್ಟಿ, ಕಾಪು ದಕ್ಷಿಣದ ಅಧ್ಯಕ್ಷರಾಇ ರಮೀಝ್ ಹುಸೇನ್, ಕಾಪು ಉತ್ತರದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್, ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಗಣೇಶ್ ಪೂಜಾರಿ, ಕುಂದಾಪುರ ಬ್ಲಾಕ್ ಗೆ ಇಚ್ಚಿತಾರ್ಥ ಶೆಟ್ಟಿ, ಕೋಟ ಬ್ಲಾಕ್ ಅಧ್ಯಕ್ಷರಾಗಿ ಸುನೀಲ್ ಮಡಿವಾಳ ಆಯ್ಕೆಯಾಗಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜನವರಿ 12 ರಂದು ಆನ್ಲೈನ್ ಮೂಲಕ ಚುನಾವಣಾ ಪ್ರಕ್ರಿಯೆ ನಡೆದಿತ್ತು.


Spread the love