ಉಡುಪಿ ಜಿಲ್ಲೆ ಅನ್ ಲಾಕ್ ಪಟ್ಟಿಗೆ ಸೇರಿಸಲು ಶಾಸಕ ರಘುಪತಿ ಭಟ್ ಒತ್ತಾಯ

Spread the love

ಉಡುಪಿ ಜಿಲ್ಲೆ ಅನ್ ಲಾಕ್ ಪಟ್ಟಿಗೆ ಸೇರಿಸಲು ಶಾಸಕ ರಘುಪತಿ ಭಟ್ ಒತ್ತಾಯ

ಉಡುಪಿ: ಜಿಲ್ಲೆಯ ವ್ಯಾಪಾರಸ್ಥರ ಹಾಗೂ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲು ನೀಡಿದ ಆದೇಶದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿಯನ್ನು ಸೇರಿಸಿ ಅನ್ ಲಾಕ್ ಮಾಡುವಂತೆ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ರಘುಪತಿ ಭಟ್ ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲು ನೀಡಿದ ಆದೇಶದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿಯನ್ನು ಸೇರಿಸಿ ಅನ್ ಲಾಕ್ ಮಾಡುವಂತೆ ನಾನು ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀಯುತ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ.

ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೊವೀಡ್ ಪರೀಕ್ಷೆ ನಡೆದಿದ್ದು, ಪ್ರಸ್ತುತ ದಿನಕ್ಕೆ 3 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಅದರಲ್ಲಿ ಶೇ.5.05 ಪಾಸಿಟಿವಿಟಿ ದರ ಇರುವುದರಿಂದ ಉಡುಪಿ ಜಿಲ್ಲೆಯನ್ನು ಅನ್ ಲಾಕ್ ಮಾಡಬಹುದು. ಇಲ್ಲವಾದರೆ ಎಲ್ಲಾ ವರ್ಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ ಲಾಕ್ ಡೌನ್ ನಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವರ್ಗದ ಜನ ಸಂಕಷ್ಟಕ್ಕೊಳಗಾಗಿರುವುದರಿಂದ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿ ಅನ್ ಲಾಕ್ ಮಾಡುವುದು ಸೂಕ್ತ ಎಂದು ಅವರು ಮನವಿ ಮಾಡಿದ್ದಾರೆ.


Spread the love