ಉಡುಪಿ ಜಿಲ್ಲೆ ರಜತಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರ ಆಗಮನ  – ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

Spread the love

ಉಡುಪಿ ಜಿಲ್ಲೆ ರಜತಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರ ಆಗಮನ  – ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

ಉಡುಪಿ: ಉಡುಪಿ ಜಿಲ್ಲೆ 25 ವರ್ಷ ಪೂರೈಸಿದ ಕುರಿತು ರಜತಮಹೋತ್ಸವ ಕಾರ್ಯಕ್ರಮಕ್ಕೆ ಆಗಸ್ಟ್ 25 ರಂದು ರಾಜ್ಯಪಾಲರು ಕರ್ನಾಟಕ ಸರ್ಕಾರರವರ ಆಗಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಉಡುಪಿ ನಗರದದಲ್ಲಿ ಸಾರ್ವಜನಿಕ ಸುಗಮ ಸಂಚಾರದ ಸಲುವಾಗಿ ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಹೇಳಿದ್ದಾರೆ.

ಸಂಚಾರ ಮಾರ್ಪಾಡು ವಿವರ ಇಂತಿದೆ

1. ಅಜ್ಜರಕಾಡು ಮೈದಾನ ಮುಂಭಾಗಕ್ಕೆ ಜಿಲ್ಲಾಡಳಿತದಿಂದ ನೀಡಲಾದ ಪಾಸ್ ಇರುವ ವಿಐಪಿ ವಾಹನಗಳಿಗೆ ಪುರಭವನದ ಪಕ್ಕದ ರಸ್ತೆಯಲ್ಲಿ ಪಾರ್ಕ್ ಮಾಡುವುದು.

2. ಸದ್ರಿ ಕಾರ್ಯಕ್ರಮಕ್ಕೆ ಕುಂದಾಪುರ ಮಲ್ಪೆ ಕಾಪು, ಪಡುಬಿದ್ರೆ, ಕಡೆಯಿಂದ ಬರುವಂತಹ ಸಾರ್ವಜನಿಕ ವಾಹನಗಳನ್ನು ಸೈಂಟ್ ಸಿಸಿಲಿಯಾ ಶಾಲೆಯ ಮೈದಾನದಲ್ಲಿ ಪಾರ್ಕ್‌ ಮಾಡುವುದು.

3. ಅಲೆವೂರು ಮೂಡುಬೆಳ್ಳೆ ಮಣಿಪಾಲ ಕಾರ್ಕಳ ಕಡೆಗಳಿಂದ ಬರವಂತಹ ವಾಹನಗಳಿಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಶಾಲಾ ಮೈದಾನ ಮತ್ತು ಕ್ರಿಶ್ಚಿಯನ್ ಪಿಯು ಕಾಲೇಜಿನ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿದ್ದು, ಅಲ್ಲಿಯೇ ಪಾರ್ಕ್ ಮಾಡಬೇಕು.

4. ಬೋರ್ಡ್ ಹೈಸ್ಕೂಲಿನಿಂದ ಹುತಾತ್ಮರ ಸ್ಮಾರಕದ ವರೆಗೆ ಶಾಲಾ ಮಕ್ಕಳ ಮೆರವಣಿಗೆ ಇದ್ದು ಮೆರವಣಿಗೆ ಪ್ರಾರಂಭವಾಗಿ ಮುಕ್ತಾಯದವರೆಗೂ ಸದ್ರಿ ಮಾರ್ಗದಲ್ಲಿ ಬಸ್ ಮಾರ್ಗ ಬದಲಾವಣೆ ಮಾಡಲಾಗುವುದು. ಆ ಕಾಲಕ್ಕೆ ಸಾರ್ವಜನಿಕರು ಸಹಕರಿಸಬೇಕು.

5. ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಂದ ಬರುವಂತಹ ವಾಹನಗಳು ಸದಸ್ಯರನ್ನು ಪುರಭವನ ಹಾಗೂ ಜೋಡುಕಟ್ಟೆ ಬಳಿ ಇಳಿಸಿ, ತಮ್ಮ ವಾಹನಗಳನ್ನು ಜೋಡುಕಟ್ಟೆಯಿಂದ ಕಿನ್ನಿಮುಲ್ಕಿವರೆಗೆ ರಸ್ತೆಯ ಎಡ ಮತ್ತು ಬಲ ಬದಿ ಪಾರ್ಕಿಂಗ್ ಮಾಡಬೇಕು.

6. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸೈಂಟ್ ಸಿಸಿಲಿಯಾ ಹಾಗೂ ಮಿಷನ್ ಕಂಪೌಂಡ್ ಬಳಿ ಇರುವ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love