ಉಡುಪಿ: ಜೆ ಪಿ ನಡ್ಡಾ ಕಾರ್ಯಕ್ರಮದ ಸ್ವಾಗತ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಕಿಡಿಗೇಡಿಗಳು – ದೂರು ದಾಖಲು

Spread the love

ಉಡುಪಿ: ಜೆ ಪಿ ನಡ್ಡಾ ಕಾರ್ಯಕ್ರಮದ ಸ್ವಾಗತ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಕಿಡಿಗೇಡಿಗಳು – ದೂರು ದಾಖಲು

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೋಮವಾರ ಉಡುಪಿಗೆ ಭೇಟಿ ನೀಡಿಲಿದ್ದು ಈ ಹಿನ್ನಲೆಯಲ್ಲಿ ರಸ್ತೆಪಕ್ಕದಲ್ಲಿ ಹಾಕಿದ್ದ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿದೆ.

ಫೆ. 20ರ ಬೆಳಗ್ಗೆ 9.30ಕ್ಕೆ ಆದಿಉಡುಪಿ ಹೆಲಿಪ್ಯಾಡ್ಗೆ ನಡ್ಡಾ ಅವರು ಆಗಮಿಸಲಿದ್ದಾರೆ. ಅದಲ್ಲಿಂದ ಶ್ರೀ ಕೃಷ್ಣಮಠದ ಭೇಟಿ ನೀಡಿ ದೇವರ ದರ್ಶನ ಪಡೆದು, ಪರ್ಯಾಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯಲಿದ್ದಾರೆ. ತದನಂತರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಜಿಲ್ಲೆಯ ಬೂತ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಅಲ್ಲಿಂದ ಬೈಂದೂರಿಗೆ ತೆರಳಿದ್ದು ಈ ಹಿನ್ನಲೆಯಲ್ಲಿ ಉಡುಪಿ ನಗರದಾದ್ಯಂತ ನಡ್ಡಾ ಅವರಿಗೆ ಸ್ವಾಗತ ಕೋರಿ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಬಂಟಿಂಗ್ಸ್ ಅಳವಡಿಸಿದ್ದು ಬನ್ನಂಜೆ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಶನಿವಾರ ತಡರಾತ್ರಿ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಈ ಕುರಿತು ಉಡುಪಿ ಜಿಲ್ಲಾ ಬಿಜೆಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.


Spread the love