ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

Spread the love

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

ಮಂಗಳೂರು: ಜಿಲ್ಲಾ ಕಂಬಳ ಸಮಿತಿಯ ಸಭೆಯು ರವಿವಾರ ಮೂಡುಬಿದಿರೆಯಲ್ಲಿ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್‌ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು.

ನವೆಂಬರ್ 5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಋತು ಪ್ರಾರಂಭಗೊಳ್ಳಲಿದ್ದು, ಎಪ್ರಿಲ್‌ 8ರ ವರೆಗೆ ಒಟ್ಟು 24 ಕಂಬಳಗಳು ನಡೆಯಲಿವೆ.

ಕಂಬಳ ವೇಳಾಪಟ್ಟಿ ಇಂತಿದೆ
ನವೆಂಬರ್ 5 – ಶಿರ್ವ, ನವೆಂಬರ್ 12 – ಪಿಲಿಕುಳ, ನವೆಂಬರ್ 19 – ಪಜೀರ್, ನವೆಂಬರ್ 26 – ಕಕ್ಕೆಪದವು, ಡಿಸೆಂಬರ್ 3 – ವೇಣೂರು, ಡಿಸೆಂಬರ್ 10 – ಬಾರಾಡಿ ಬೀಡು, ಡಿಸೆಂಬರ್ 17 – ಹೊಕ್ಕಾಡಿಗೋಳಿ, ಡಿಸೆಂಬರ್ 18 – ಬಳ್ಳಮಂಜ, ಡಿಸೆಂಬರ್ 24 – ಮೂಡಬಿದರೆ, ಡಿಸೆಂಬರ್ 31 – ಮೂಲ್ಕಿ ಅರಸು, ಜನವರಿ – 7 ಮಿಯಾರು, ಜನವರಿ 15 – ಅಡ್ವೆ ನಂದಿಕೂರು, ಜನವರಿ 22-ಮಂಗಳೂರು ಬಂಗ್ರಕೂಳೂರು, ಜನವರಿ 28-ಐಕಳಬಾವ, ಫೆಬ್ರವರಿ 4 – ಪುತ್ತೂರು, ಫೆಬ್ರವರಿ 11 – ವಾಮಂಜೂರು, ಫೆಬ್ರವರಿ 18 – ಕಟಪಾಡಿ, ಫೆಬ್ರವರಿ 25 – ಜೆಪ್ಪು, ಮಾರ್ಚ್ 4 – ನಾವೂರು, ಮಾರ್ಚ್ 11 – ಉಪ್ಪಿನಂಗಡಿ, ಮಾರ್ಚ್ 18 – ಬಂಗಾಡಿ, ಮಾರ್ಚ್ 25 – ಪೈವಳಿಕೆ, ಏಪ್ರಿಲ್ 1 – ಸುರತ್ಕಲ್, ಏಪ್ರಿಲ್ 8 – ಪಣಪಿಲ


Spread the love