ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿಗಳಾಗಿ ವಂ|ಡಾ| ರೋಶನ್ ಡಿ’ಸೋಜಾ ನೇಮಕ

Spread the love

ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿಗಳಾಗಿ ವಂ|ಡಾ| ರೋಶನ್ ಡಿ’ಸೋಜಾ ನೇಮಕ

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಜೆರಾಲ್ಡ್ ಐಸಾಕ್ ಲೋಬೊರವರು ವಂ. ಡೊ. ರೋಶನ್ ಡಿಸೋಜಾರವರನ್ನು ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿಗಳನ್ನಾಗಿ ನೇಮಕ ಮಾಡಿದ್ದಾರೆ.

ಧರ್ಮಾಧ್ಯಕ್ಷರ ನಿವಾಸದಲ್ಲಿ ಇಂದು ನಡೆದ ಸರಳ ಪ್ರಾರ್ಥನಾವಿಧಿಯ ವೇಳೆ ಧರ್ಮಾಧ್ಯಕ್ಷರು ನೂತನ ಕುಲಪತಿ ವಂ. ಡೊ. ರೋಶನ್ ಡಿಸೋಜಾರವರಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ನಂತರ ಧರ್ಮಾಧ್ಯಕ್ಷರು ನೂತನ ಕುಲಪತಿಗಳಿಗೆ ಕುಲಪತಿ ಪೀಠದ ದಾಖಲೆಗಳನ್ನು ಹಸ್ತಾಂತರಿಸಿ, ಶುಭ ಹಾರೈಸಿದರು. ಉಡುಪಿ ಧರ್ಮಪ್ರಾಂತ್ಯದ ವಿವಿಧ ಆಯೋಗಗಳ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಂ. ಡೊ. ರೋಶನ್ ಡಿಸೋಜಾರವರು 15 ಎಪ್ರಿಲ್ 2010ರಂದು ಗುರುದೀಕ್ಷೆಯನ್ನು ಸ್ವೀಕರಿಸಿದ್ದು, ರೊಜಾರಿಯೊ ಕ್ಯಾಥೀಡ್ರಲ್, ಕುಲಶೇಖರ ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸಂತ ಪೀಟರ್ಸ್ ಪೋಂತಿಫಿಕಾಲ್ ಸಂಸ್ಥೆಯಲ್ಲಿ ಕ್ಯಾನನ್ ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ರೋಮ್‍ನ ಉರ್ಬಾನಿಯಾನ ಫೋಂತಿಫಿಕಾಲ್ ವಿಶ್ವವಿದ್ಯಾನಿಲಯದಲ್ಲಿ ಕ್ಯಾನನ್ ಲಾ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ. ರೋಮನ್ ರೋಟಾ ಟ್ರಿಬ್ಯುನಲ್‍ನಲ್ಲಿ ನ್ಯಾಯಶಾಸ್ತ್ರದ ಡಿಪ್ಲೋಮಾ ಪಡೆದಿರುತ್ತಾರೆ.


Spread the love