
ಉಡುಪಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಂಕಲ್ಪ ತಿರಂಗಾ ಸೈಕಲ್ ಜಾಥಾ
ಉಡುಪಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಮತ್ತು ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಸಹಯೋಗದಲ್ಲಿ ಭಾನುವಾರ ಯುವ ಸಂಕಲ್ಪ ತಿರಂಗಾ ಯಾತ್ರೆ ಸೈಕಲ್ ಜಾಥಾ ಕಾರ್ಯಕ್ರಮ ಉಡುಪಿ ನಗರದಲ್ಲಿ ಜರುಗಿತು.
ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ವಿ ಸುನೀಲ್ ಕುಮಾರ್ ಅವರು ಯುವ ಸಂಕಲ್ಪ ತಿರಂಗಾ ಯಾತ್ರೆ ಸೈಕಲ್ ಜಾಥಾಕ್ಕೆ ಮಣಿಪಾಲದಲ್ಲಿ ಚಾಲನ ನೀಡಿದರು.
ಸೈಕಲ್ ಜಾಥಾವು ಮಣಿಪಾಲ ಸಿಂಡಿಕೇಟ್ ಸರ್ಕಲ್ ಮೂಲಕ ಆರಂಭಗೊಂಡು ಉಡುಪಿ ನಗರದಿಂದ ಹಾದು ಹೋಗಿ ಮಲ್ಪೆ ಬೀಚ್ ಬಳಿ ಗಾಂಧಿ ಪ್ರತಿಮೆ ಬಳಿ ಸಂಪನ್ನಗೊಂಡಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಪದಾಧಿಕಾರಿಗಳಾದ ಅಕ್ಷಿತ್ ಶೆಟ್ಟಿ ಹೆರ್ಗ, ರೋಶನ್ ಶೆಟ್ಟಿ, ಶರತ್ ಉಪ್ಪುಂದ, ಅಭಿರಾಜ್ ಸುವರ್ಣ, ಸಂದೇಶ್ ಪ್ರಭು ಹಾಗೂ ಇತರರು ಉಪಸ್ಥಿತರಿದ್ದರು.