ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಪತಿಗೆ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

Spread the love

ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಪತಿಗೆ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ

ಉಡುಪಿ: ವ್ಯಕ್ತಿಯೋರ್ವ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಮನೆಗೆ ನುಗ್ಗಿ ಅವರ ಪತಿಗೆ ಮಾರಾಕಾಯುಧದಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರ ಅಲೆವೂರು ಸಮೀಪದ ಮಂಚಿ ಬಳಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕೃಷ್ಣ ನಾಯ್ಕ್ (54) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಆನಂದ ಎಂದು ಗುರುತಿಸಲಾಗಿದೆ.

ಶಾಂತಾ ನಾಯ್ಕ್ ಮನೆಗೆ ನುಗ್ಗಿದ ಆರೋಪಿ ಅರ್ಜುನ್ ಕೃಷ್ಣ ನಾಯ್ಕ್ ಅವರಿಗೆ ಕಬ್ಬಿಣ ಸಲಕರಣೆಯಿಂದ ಇರಿದು ಪರಾರಿಯಾಗಿದ್ದನು. ಹಲ್ಲೆಯಿಂದ ಕೃಷ್ಣ ನಾಯ್ಕ್ ಅವರಿಗೆ ತೀವ್ರ ರಕ್ತಸ್ರಾವದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನಡೆಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.


Spread the love