
Spread the love
ಉಡುಪಿ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಶ್ರೀಶ ಕೊಡವೂರು ನೇಮಕ
ಉಡುಪಿ: ಪ್ರಸಕ್ತ ಸಾಲಿಗೆ ಉಡುಪಿ ನಗರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಮೂಡಬೆಟ್ಟು ವಾರ್ಡಿನ ಸದಸ್ಯ ಶ್ರೀಶ ಕೊಡವೂರು ಅವರನ್ನು ಆಯ್ಕೆ ಮಾಡಲಾಗಿದೆ.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸ್ಥಾಯೀ ಸಮಿತಿ ಸಭೆಯಲ್ಲಿ ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಸಭೆಯಲ್ಲಿ ಸ್ಥಾಯೀ ಸಮಿತಿಯ ಸದಸ್ಯರಾದ ಸಂಪಾವತಿ, ಸಂತೋಷ್ ಜತ್ತನ್, ಡಿ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ವಿ ಸಾಲ್ಯಾನ್, ಮಾನಸ ಸಿ ಪೈ, ಭಾರತಿ ಪ್ರಶಾಂತ್, ಜಯಂತಿ ಕೆ ಪೂಜಾರಿ, ಕಲ್ಪನಾ ಸುಧಾಮ, ಅಶ್ವಿನಿ ಅರುಣ್ ಪೂಜಾರಿ ಹಾಗೂ ಅಮೃತ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
Spread the love