ಉಡುಪಿ: ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಅರ್ಜಿ ಅಹ್ವಾನ

OLYMPUS DIGITAL CAMERA
Spread the love

ಉಡುಪಿ: ನಾಗರೀಕ ಬಂದೂಕು ತರಬೇತಿ ಶಿಬಿರಕ್ಕೆ ಅರ್ಜಿ ಅಹ್ವಾನ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ 2021 ನೇ ಸಾಲಿನ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿಎಆರ್ ಉಡುಪಿ ಇಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರ (Civil Rifle Training Course) ನ್ನು ನಡೆಸಲು ಉದ್ದೇಶಿಸಲಾಗಿರುತ್ತದೆ.

ನಾಗರೀಕ ಬಂದೂಕು ತರಬೇತಿಯ ಅರ್ಜಿ ನಮೂನೆಗಳು ಫೆಬ್ರವರಿ 11 ರಿಂದ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಪೊಲೀಸ್ ಕೇಂದ್ರಸ್ಥಾನದಲ್ಲಿ ಲಭ್ಯವಿರುತ್ತದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರೀಕರು ಅರ್ಜಿ ನಮೂನೆಗಳನ್ನು ಆಯಾಯ ಪೊಲೀಸ್ ಠಾಣೆ / ಡಿಎಆರ್ ಕೇಂದ್ರಸ್ಥಾನದಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸದ್ರಿ ಠಾಣೆ / ಡಿಎಆರ್ ಕೇಂದ್ರಸ್ಥಾನಕ್ಕೆ ಫೆಬ್ರವರಿ 14 ರೊಳಗಾಗಿ ಹಿಂತಿರುಗಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು (ಸಶಸ್ತ್ರ) ರವರ ಕಛೇರಿ ಉಡುಪಿ -0820-2521111, 9480805406, ಪೊಲೀಸ್ ನಿರೀಕ್ಷಕರ (ಸಶಸ್ತ್ರ) ರವರ ಕಛೇರಿ, ಉಡುಪಿ -0820-2523444, 8884376743


Spread the love