ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಜಿತ್ ಆರಾಡಿ, ಸಹಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ

Spread the love

ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಜಿತ್ ಆರಾಡಿ, ಸಹಸಂಚಾಲಕರಾಗಿ ಅಂಕಿತ್ ಶೆಟ್ಟಿ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಪತ್ರಿಕಾ ಭವನ ಸಮಿತಿಯ ನೂತನ ಸಂಚಾಲಕರಾಗಿ ವಿಜಯ ಕರ್ನಾಟಕ ಪತ್ರಿಕೆಯ ಉಡುಪಿ ವರದಿಗಾರ ಅಜಿತ್ ಅರಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಮಿತಿ ಸಹಸಂಚಾಲಕರಾಗಿ ದಿಗ್ವಿಜಯ ವಾಹಿನಿಯ ಉಡುಪಿ ವಿಡಿಯೋ ಜರ್ನಲಿಸ್ಟ್ ಅಂಕಿತ್ ಶೆಟ್ಟಿ ಹಾಗೂ ಪದನಿಮಿತ್ತ ಸಹ ಸಂಚಾಲಕರಾಗಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು(ಪದನಿಮಿತ್ತ ಪ್ರಥಮ ಸದಸ್ಯರು), ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ(ಪದ ನಿಮಿತ್ತ ಎರಡನೇ ಸದಸ್ಯರು) ಹಾಗೂ ಅವಿನ್ ಶೆಟ್ಟಿ, ದಿನೇಶ್ ಕಾಶಿಪಟ್ಣ, ಜಸ್ಟಿನ್ ಡಿಸಿಲ್ವ, ದಿನೇಶ್ ಎಂ.ಎಚ್., ಜೀವನ್ ಆರ್.ಶೆಟ್ಟಿ, ಜನಾರ್ದನ ಕೊಡವೂರು, ಗಣೇಶ್ ಕಲ್ಯಾಣಪುರ, ಪರೀಕ್ಷಿತ್ ಶೇಟ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್ ಉಪಸ್ಥಿತರಿದ್ದರು.


Spread the love