ಉಡುಪಿ: ಪಿಎಫ್‌ಐ ಸಂಘಟನೆಗೆ ಸೇರಿದ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

Spread the love

ಉಡುಪಿ: ಪಿಎಫ್‌ಐ ಸಂಘಟನೆಗೆ ಸೇರಿದ ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

ಉಡುಪಿ: ಕೇಂದ್ರ ಸರಕಾರವು ಪಿಎಫ್‌ಐ ಮತ್ತಿತರ 8 ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲೆಯ ವಿವಿಧೆಡೆ ಪಿ ಎಫ್ ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ‌.

ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪಿ ಎಫ್ ಐ ಸಂಘಟನೆಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪಿ ಎಫ್ ಐ ಗೆ ಯಾವುದೇ ಅಧಿಕೃತ ಕಚೇರಿಗಳಿಲ್ಲದಿದ್ದು, ಎಸ್ ಡಿ ಪಿ ಐ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಹಿನ್ನಲೆಯಲ್ಲಿ ಅವುಗಳಿಗೆ ಸಹ ಬೀಗ ಜಡಿದಿದ್ದಾರೆ.

ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡದಲ್ಲಿದ್ದ ಕಚೇರಿ, ಹೂಡೆ, ಗಂಗೊಳ್ಳಿಯ ಎಸ್ ಡಿ ಪಿ ಐ ಕಚೇರಿ ಸೀಜ್ ಮಾಡಿದ್ದು ಎಸ್ ಡಿ ಪಿ ಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆಗೂ ದಾಳಿ ನಡೆಸಿದ್ದು ಈ ವೇಳೆ ಅವರ ಮನೆಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಪಾಸಾಗಿದ್ದಾರೆ


Spread the love