ಉಡುಪಿ ಪೋಲಿಸರಿಂದ ರೂ. 90.73 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

Spread the love

ಉಡುಪಿ ಪೋಲಿಸರಿಂದ ರೂ. 90.73 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

ಉಡುಪಿ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ 2020 ರಿಂದ 2021 ರ ಅಕ್ಟೋಬರ್‌ ಅಂತ್ಯದ ವರೆಗೆ ದಾಖಲಾಗಿರುವ 312 ಪ್ರಕರಣ ಭೇದಿಸಿ ಜಪ್ತಿ ಮಾಡಿಕೊಳ್ಳಲಾದ ನಗದು, ಚಿನ್ನಾಭರಣ ಹಾಗೂ ವಾಹನ ಸೇರ 90, 78, 563 ರೂ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಎನ್‌ ವಿಷ್ಣುವರ್ಧನ್‌ ಹೇಳಿದರು.

ಅವರು ಮಂಗಳವಾರ ನಗರದ ಡಿ ಎಆರ್‌ ಮೈದಾನದಲ್ಲಿ ಜಪ್ತಿ ಮಾಡಿಕೊಂಡ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 2020 ರಲ್ಲಿ ದಾಖಲಾಗಿದ್ದ 151 ಪ್ರಕರಣಗಳ ರೂ 58,47,375 ಹಾಗೂ 2021 ರಲ್ಲಿ ದಾಖಲಾಗಿರುವ 161 ಪ್ರಕರಣಗಳಲ್ಲಿ ರೂ 32,31,188 ಮೊತ್ತದ ಸ್ವತ್ತುಗಳನ್ನು ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರ ಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ, ಕಾರ್ಕಳ ಡಿವೈಎಸ್ಪಿ ಎಸ್‌ ವಿಜಯ ಪ್ರಸಾದ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love