ಉಡುಪಿ: ಫಾಸ್ಟ್‌ಟ್ಯಾಗ್‌ ಸರಿಪಡಿಸುವುದಾಗಿ ರೂ 99,997 ವಂಚನೆ

Spread the love

ಉಡುಪಿ: ಫಾಸ್ಟ್‌ಟ್ಯಾಗ್‌ ಸರಿಪಡಿಸುವುದಾಗಿ ರೂ 99,997 ವಂಚನೆ

ಉಡುಪಿ: ಪೇಟಿಎಂ ಫಾಸ್ಟ್‌ ಟ್ಯಾಗ್‌ ಸರಿಪಡಿಸುವುದಾಗಿ ನಂಬಿಸಿ ಒಟಿಪಿ ಪಡೆದುಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ರೂ. 99,997 ದೋಚಲಾಗಿದೆ.

ಫ್ರಾನ್ಸಿಸ್‌ ಪಿಯುಸ್ ಪುಟಾರ್ಡೋ ವಂಚನೆಗೊಳಗಾದವರು. ಪೇಟಿಎಂ ಫಾಸ್ಟ್‌ ಟ್ಯಾಗ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಗೂಗಲ್‌ನಲ್ಲಿ ದೊರೆತ ಮೊಬೈಲ್‌ ನಂಬರ್‌ಗೆ ಫ್ರಾನ್ಸಿಸ್‌ ಕರೆ ಮಾಡಿದಾಗ, ಪೇಟಿಎಂ ಫಾಸ್ಟ್‌ ಟ್ಯಾಗ್ ವೆಬ್‌ಸೈಟ್ ಅಧಿಕಾರಿ ಎಂದು ವಂಚಕ ಪರಿಯಿಸಿಕೊಂಡಿದ್ದಾನೆ.

ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದು ಮೊಬೈಲ್‌ಗೆ ಬಂದ ಒಟಿಪಿ ಪಡೆದುಕೊಂಡು ಫ್ರಾನ್ಸಿಸ್‌ ಖಾತೆಯಿಂದ ಕ್ರಮವಾಗಿ, ರೂ 49,000, ರೂ19,999, ರೂ 19998, ರೂ 9,999, ರೂ 1,000ದಂತೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love