ಉಡುಪಿ: ಬ್ಯಾನರ್, ಕಟೌಟ್ಗಳ ತೆರವಿಗೆ ಮಾ. 24 ಕೊನೆ ದಿನ

Spread the love

ಉಡುಪಿ: ಬ್ಯಾನರ್, ಕಟೌಟ್ಗಳ ತೆರವಿಗೆ ಮಾ. 24 ಕೊನೆ ದಿನ

ಉಡುಪಿ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ರ ಪ್ರಯುಕ್ತ ಉಡುಪಿ ನಗರಸಭೆಯಿಂದ ಅನುಮತಿ ನೀಡಿ ಅವಧಿ ಮುಗಿದಿರುವ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್ಗಳನ್ನು ಮಾರ್ಚ್ 24 ರ ಒಳಗೆ ತೆರವುಗೊಳಿಸಬೇಕು.

ಕಾರ್ಯಕ್ರಮ ನಡೆಸಲು ಹಾಗೂ ಬ್ಯಾನರ್ ಮತ್ತು ಕಟೌಟ್ಗಳನ್ನು ಅಳವಡಿಸಲು ನಗರಸಭೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಸದರಿ ಬ್ಯಾನರ್, ಬಂಟಿಂಗ್ಸ್ ಹಾಗೂ ಹೋರ್ಡಿಂಗ್ಸ್ಗಳನ್ನು ಅನಧಿಕೃತವೆಂದು ಪರಿಗಣಿಸಿ, ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಪೌರಾಯುಕ್ತರಕಚೇರಿ ಪ್ರಕಟಣೆ ತಿಳಿಸಿದೆ.


Spread the love