ಉಡುಪಿ: ಬ್ರಾಹ್ಮಣ ಯುವತಿಯರ ವಿವಾಹ ಕುರಿತ ಪೇಜಾವರ ಶ್ರೀ ಹೇಳಿಕೆಗೆ ಅದಮಾರು ಈಶಪ್ರೀಯ ಸ್ವಾಮೀಜಿ ಬೆಂಬಲ

Spread the love

ಬ್ರಾಹ್ಮಣ ಯುವತಿಯರ ವಿವಾಹ ಕುರಿತ ಪೇಜಾವರ ಶ್ರೀ ಹೇಳಿಕೆಗೆ ಅದಮಾರು ಈಶಪ್ರೀಯ ಸ್ವಾಮೀಜಿ ಬೆಂಬಲ

ಉಡುಪಿ: ಬ್ರಾಹ್ಮಣ ಯುವತಿಯರ ವಿವಾಹ ಕುರಿತ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ಹೇಳಿಕೆಗೆ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಅವರು ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಪೇಜಾವರ ಸ್ವಾಮೀಗಳ ಹೇಳಿಕೆಗೆ ತಮ್ಮ ಪೂರ್ಣ ಬೆಂಬಲವಿದೆ. ಇಂದಿನ ದಿನಗಳಲ್ಲಿ ಮಕ್ಕಳು ಹಿರಿಯರ ಕಣ್ಗಾವಲಿನಿಂದ ತಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳು ಕಾಳಜಿಯ ಮಾತನಾಡಿದ್ದಾರೆ.

ಇಂದಿನ ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದ್ದು, ಯುವ ಜನಾಂಗ ದಾರಿ ತಪ್ಪಿ ಹೋಗುತ್ತಿದೆ . ಕಡೆಗಾಲದಲ್ಲಿ ತಮಗೆ ಯಾರು ಗತಿ ಇಲ್ಲವೆಂದು ಪೋಷಕರು ಪರದಾಡುತ್ತಿದ್ದಾರೆ. ಕುಟುಂಬವನ್ನು ನಿರ್ಲಕ್ಷಿಸಿದ ಯುವಕರ ಸ್ಥಿತಿಯೂ ಹದಗೆಡುತ್ತಿದ್ದು, ತಮ್ಮ ಮಕ್ಕಳು ದಾರಿ ತಪ್ಪಬಾರದು ಎಂದು ಹಿರಿಯರು ಹೇಳಿದರೆ ತಪ್ಪಿಲ್ಲ. ತಮ್ಮ ಮಕ್ಕಳು ಹೀಗೆಯೇ ಇರಬೇಕು ಎಂದು ಹಿರಿಯರು ಅಂದುಕೊಂಡರೆ ತಪ್ಪೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಆತುರದ ನಿರ್ಧಾರಗಳು ಅನಾಹುತ ತರುತ್ತವೆ ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳು ಜಾಗರೂಕರಾಗಿರಬೇಕು. ಸಮಾಜವನ್ನು ತಿದ್ದುವ ಮಾತುಗಳನ್ನು ಶ್ರೀಗಳು ಆಡಿದರೆ ತಪ್ಪಿಲ್ಲ ಸಮಾಜದ ಬಗೆಗಿನ ಕಾಳಜಿಯಿಂದ ಶ್ರೀಗಳು ಮಾತನಾಡಿದ್ದಾರೆ ಆದರೆ ಪ್ರಸಿದ್ಧಿಗೆ ಬರಬೇಕು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


Spread the love