ಉಡುಪಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೇಷನ್ ಕಿಟ್ ವಿತರಣೆ

Spread the love

ಉಡುಪಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೇಷನ್ ಕಿಟ್ ವಿತರಣೆ

ಉಡುಪಿ :ಉಡುಪಿ ಮಲಬಾರ್ ಚಾರಿಟೇಬಲ್ ಟ್ರಸ್ಟ್  ಸಂಸ್ಥೆಯ ವತಿಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 126 ಅರ್ಹ ಫಲಾನುಭವಿ ಕುಟುಂಬಗಳಿಗೆ ಸೋಮವಾರ ಪಡಿತರ ಕಿಟ್ಗಳನ್ನು ವಿತರಿಸ ಲಾಯಿತು.

ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಪಡಿತರ ಕಿಟ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಸಮಾಜ ಸೇವಕ ಸುಧೀರ್ ನಾಯಕ್ ಮನವಿ ಮೇರೆಗೆ ಮಣಿಪಾಲ ರಾಜೀವ ನಗರದ ಅಸುಪಾಸಿನ ಕೋವಿಡ್ ಸಂಕಷ್ಟದಲ್ಲಿರುವ ಬಡವರ ಕುಟುಂಬಗಳಿಗೆ ಕಿಟ್ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಭಾಕರ ನಾಯಕ್, ವಿಶ್ವಮೂರ್ತಿ ಆಚಾರ್ಯ, ದೀಪು, ಗ್ರಾಪಂ ಸದಸ್ಯರಾದ ಫೇರ್ನಾಂಡೀಸ್ ಮತ್ತು ಸುಧೀರ್ ಪೂಜಾರಿ ಉಪಸ್ಥಿತರಿದ್ದರು.

ಬ್ರಹ್ಮವಾರದ ಕೊಲಂಬೆಯಲ್ಲಿ ಮಂಗಳಮುಖಿ ಸಮುದಾಯದ ನಗ್ಮಾ ಕಾಜಲ್ ಮನವಿ ಮೇರೆಗೆ ಪಣಿಯೂರು ಗ್ರಾಮದಲ್ಲಿ ಸುಷ್ಮಾರವರ ಮನವಿ ಮೇರೆಗೆ, ಉದ್ಯವಾರದಲ್ಲಿ ಪುರಂದರ ತಿಂಗಲಾಯ ಮನವಿ ಮೇರೆಗೆ ರೇಷನ್ ಕಿಟ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಇರ್ಷಾದ್, ನಿತೀನ್, ಶೇಟ್, ತಸ್ಲೀಮ್, ಫಯಾಜ್ ಉಪಸ್ಥಿತರಿದ್ದರು


Spread the love