ಉಡುಪಿ: ಮಲಬಾರ್  ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Spread the love

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಸಿಆರ್‌ಎಸ್ ಯೋಜನೆಯಡಿಯಲ್ಲಿ ಜಿಲ್ಲೆಯ 53 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಶನಿವಾರ ಶಾಖೆಯಲ್ಲಿ ಜರಗಿತು.

ಬೈಂದೂರು ವಿಧಾನಸಭೆ ಶಾಸಕರಾದ ಸುಕುಮಾರ್ ಶೆಟ್ಟಿ ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಕೆ.ಎಮ್.ಎಫ್ ನ ನಿರ್ದೇಶಕರಾದ ದಿವಾಕರ್ ಶೆಟ್ಟಿ ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೊಲ್ಲೂರು ದೇವಸ್ಥಾನದ ಮಕ್ತೆಸರರು ಚಂದ್ರಶೇಖರ್ ಶೆಟ್ಟಿ ಮಾತನಾಡಿ ಜೀವನದಲ್ಲಿ ಒಳ್ಳೆಯ ಸಂಸ್ಕಾರವಂತರರಾಗಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಜಮಿಯಿತುಲ್ ಫಲಾಹ್ (ರಿ.) ಅಧ್ಯಕ್ಷರಾದ ಶಬಿ ಅಹ್ಮದ್ ಕಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ವಿದ್ಯಾ ಸರಸ್ವತಿ ರವರು ಮಾತನಾಡಿ ಸಂಸ್ಥೆಯು ವ್ಯಾಪಾರದಲ್ಲಿ ಬರುವ ಲಾಭಂಶದ ಶೇ.5ರಷ್ಟು ಹಣವನ್ನು ಸಿಎಸ್‌ಆರ್ ನಿಧಿ ನೀಡುತ್ತಿದ್ದು, ಇದರಲ್ಲಿ ಬಡವರಿಗೆ ಉಚಿತ ಔಷಧಿ ವಿತರಣೆ, ಪರಿಸರ ಕಾಳಜಿ, ಉಚಿತ ಗೃಹ ನಿರ್ಮಾಣ, ವಿದ್ಯಾರ್ಥಿ ವೇತನ,ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ಒಟ್ಟು ಭಾರತದಾದ್ಯಂತ 9.45 ಲಕ್ಷ ಫಲಾನುಭವಿಗಳಿಗೆ 165 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಅಧಿಕ ಅಂಕ ಪಡೆದ ಹರ್ಷಿತ,ಗುರುರಾಜ್,ಪುನೀತ್ ನಾಯ್ಕ್ ಮಲ್ಪೆ,ಅದ್ವೈತ್ ಶಂಕರನಾರಾಯಣ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್,ಪುರಂದರ ತಿಂಗಳಾಯ,ತಂಝೀಮ್ ಶಿರ್ವ,ಸಂದ್ಯಾ ಶೆಣೈ ಹಾಗೂ ಗಣ್ಯರು,ಹಿತೈಷಿಗಳು,ವಿವಿಧ ಕಾಲೇಜಿನ ಪ್ರಾಂಶುಪಾಲರು,ಅಧ್ಯಾಪಕರು, ಮಕ್ಕಳ ಪೋಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಘ್ನೇಶ್ ನಿರೂಪಿಸಿ ರಾಘವೇಂದ್ರ ನಾಯಕ್ ವಂದಿಸಿದರು.


Spread the love