ಉಡುಪಿ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಅವರಿಗೆ ಸನ್ಮಾನ

Spread the love

ಉಡುಪಿ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಅವರಿಗೆ ಸನ್ಮಾನ

ಉಡುಪಿ: ಸತತ ಐದನೇ ಬಾರಿಗೆ ದಿ.ಮುಸ್ಲಿಮ್ ಸೆಂಟ್ರಲ್ ಕಮಿಟಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರನ್ನು ಮುಸ್ಲಿಮ್ ಸೆಂಟ್ರಲ್ ಕಮಿಟಿ ಉಡುಪಿ, ಕಾರ್ಕಳ, ಕುಂದಾಪುರ ಇದರ ನೇತೃತ್ವದಲ್ಲಿ ಮಲ್ಪೆಯ ನಕ್ವಾಸ್ ಹೌಸ್ನಲ್ಲಿ ಶನಿವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯ ಎದು ರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಎಲ್ಲ ಒಗ್ಗಟ್ಟಿನಲ್ಲಿ ಮುಂದಾಗಬೇಕು. ಆ ಮೂಲಕ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ನಡೆದ ಬೆತ್ತಲೆ ಪ್ರಕರಣ, ಹಿಜಾಬ್ ವಿವಾದದ ವಿರುದ್ಧ ಹಾಗೂ ಶಿರೂರಿನಲ್ಲಿ ನೆರೆ ಬಂದಾಗ ನಾವು ಧ್ವನಿ ಎತ್ತಿದ್ದೆವು ಎಂದು ತಿಳಿಸಿದರು.

ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾದ ಸಿ.ಮೆಹಮೂದ್ ಹಾಜಿ, ಇಬ್ರಾಹಿಂ ಕೋಡಿ ಜಾಲ್, ಬಾಷಾ ಸಾಹೇಬ್ ಕುಂದಾಪುರ, ಸಂಘಟನಾ ಕಾರ್ಯದರ್ಶಿ ಸಂಶುದ್ದೀನ್ ಸುಳ್ಯ, ಬಿ.ಎಸ್.ಇಮ್ತಿಯಾಝ್, ನಾಸೀರ್ ಯಾದಗರ್, ಕಾರ್ಯದರ್ಶಿ ಡಾ.ಮುಹಮ್ಮದ್ ಆರೀಫ್ ಮಸೂದ್, ಸಿ.ಎಂ.ಮುಸ್ತಫಾ, ಆಬೀದ್ ಜಲಿಯಲ್, ದ.ಕ. ಜಿಲ್ಲಾ ಮುಸ್ಲಿಮ್ ಕ್ಕೂಟದ ಅಧ್ಯಕ್ಷ ಅಶ್ರಫ್ ಕೆ. ಮುಖ್ಯ ಅತಿಥಿಗಳಾಗಿದ್ದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಗೌರವಾಧ್ಯಕ್ಷ ಪರ್ಕಳ ಹಾಜಿ ಅಬ್ದುಲ್ಲಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಡುಪಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಮುಸ್ತಾಕ್ ಬೆಳ್ವೆ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಶಾದ್, ಉದ್ಯಾವರ ಮಸೀದಿ ಅಧ್ಯಕ್ಷ ರೆಹಮತುಲ್ಲಾ, ಕೊಳಂಬೆ ಮದೀನ ಮಸೀದಿ ಅಧ್ಯಕ್ಷ ಶಮೀಮ್ ಸಾಹೇಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉದ್ಯಮಿಗಳಾದ ಪರ್ಕಳ ಅಬೂಬಕ್ಕರ್, ಜಮಾಲ್, ಸಲೀಂ, ಎಸ್.ಎಸ್.ರಝಾಕ್. ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.

ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಕೆ.ಎಸ್.ಇಮ್ತಿಯಾಜ್ ಅಹ್ಮದ್ ಸ್ವಾಗತಿಸಿ ದರು. ಕಾರ್ಯದರ್ಶಿ ಯಹ್ಯಾ ನಕ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಖಲೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು


Spread the love