ಉಡುಪಿ ರಜತೋತ್ಸವ ಸಂಭ್ರಮ ಇಂದು : ಅಭಿವೃದ್ಧಿಯಲ್ಲಿ ಶ್ರಮಿಸಿದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಿರು ಮಾಹಿತಿ

Spread the love

ಉಡುಪಿ ರಜತೋತ್ಸವ ಸಂಭ್ರಮ ಇಂದು : ಅಭಿವೃದ್ಧಿಯಲ್ಲಿ ಶ್ರಮಿಸಿದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಿರು ಮಾಹಿತಿ

ಉಡುಪಿ: 25 ವರ್ಷಗಳ ಹಿಂದೆ ಇದೇ ದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟ ಉಡುಪಿ ನೂತನ ಜಿಲ್ಲೆಯಾಗಿ ಉದಯವಾಯಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ಉಡುಪಿ ಜಿಲ್ಲೆಯನ್ನು ಉದ್ಘಾಟಿಸಿ ಶುಭ ಹಾರೈಸಿದ್ದರು.

ಜಯಪ್ರಕಾಶ್ ಹೆಗ್ಡೆ ನೂತನ ಜಿಲ್ಲೆಯ ಮೊದಲ ಜಿಲ್ಲಾ ಉಸ್ತುವಾರಿ ಸಚಿವರು, ರೆಮಿಡಿಯಾ ಡಿಸೋಜಾ ಮೊದಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಡಾ.ಕಲ್ಪನಾ ಗೋಪಾಲನ್‌ ನೂತನ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ. ಡಾ.ಸವಿತಾ ಹಂದೆ  ಪೊಲೀಸ್ ವರಿಷ್ಠಾಧಿಕಾರಿ 

ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲರು ಉಡುಪಿ ಜಿಲ್ಲೆಯ ಉದ್ಘಾಟನೆ

25 ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆ ಸವಾಲುಗಳನ್ನು ಮೀರಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್‌, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಆಡಳಿತಾತ್ಮಕ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಬೇರ್ಪಟ್ಟರೂ ಇಂದಿಗೂ ಭಾವನಾತ್ಮಕವಾಗಿ ಬೆಸೆದುಕೊಂಡಿರುವುದು ವಿಶೇಷ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ

ಪ್ರಸ್ತುತ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ನೂತನ ಜಿಲ್ಲೆಯ ಮೊದಲ ಜಿಲ್ಲಾ ಉಸ್ತುವಾರಿ ಸಚಿವರು. ಡಾ.ಕಲ್ಪನಾ ಗೋಪಾಲನ್‌ ನೂತನ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ. ಡಾ.ಸವಿತಾ ಹಂದೆ ಮೊದಲ ಪೊಲೀಸ್ ವರಿಷ್ಠಾಧಿಕಾರಿಯಾದರೆ, ರೆಮಿಡಿಯಾ ಡಿಸೋಜಾ ಮೊದಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು.

25 ವರ್ಷಗಳಲ್ಲಿ ಉಡುಪಿ ಜಿಲ್ಲೆಯು 13 ಜಿಲ್ಲಾ ಉಸ್ತುವಾರಿ ಸಚಿವರನ್ನು, 16 ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು, 18 ಜಿಲ್ಲಾಧಿಕಾರಿಗಳನ್ನು, 17 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕಂಡಿದೆ. ಅದರ ವಿವರ ಇಲ್ಲಿದೆ.

ಉಡುಪಿ ಜಿಲ್ಲಾಧಿಕಾರಿಕಾರಿಗಳು

 1. ಡಾ.ಕಲ್ಪನಾ ಗೋಪಾಲನ್‌
 2. ಎಚ್‌.ಅನಿಲ್ ಕುಮಾರ್
 3. ಗಂಗಾರಾಮ್ ಬಡೇರಿಯಾ
 4. ಗೌರವ್ ಗುಪ್ತ
 5. ಎಸ್‌.ಆರ್.ಉಮಾಶಂಕರ್
 6. ಶ್ಯಾಮ್ ಭಟ್‌
 7. ಶಾಂತರಾಜ್
 8. ವಿ.ಪೊನ್ನುರಾಜ್
 9. ಪಿ.ಹೇಮಲತಾ
 10. ಡಾ.ಎಂ.ಟಿ.ರೇಜು
 11. ಡಾ.ಮುದ್ದು ಮೋಹನ್‌
 12. ಎಸ್‌.ಎಸ್‌.ಪಟ್ಟಣಶೆಟ್ಟಿ
 13. ಡಾ.ಆರ್‌.ವಿಶಾಲ್‌
 14. ಪ್ರಿಯಾಂಕ ಮೇರಿ ಫ್ರಾನ್ಸಿಸ್‌
 15. ಟಿ.ವೆಂಕಟೇಶ್‌
 16. ಪ್ರಿಯಾಂಕ ಮೇರಿ ಫ್ರಾನ್ಸಿಸ್‌
 17. ಹೆಪ್ಸಿಬಾ ರಾಣಿ ಕೊರ್ಲಪಾಟಿ
 18. ಜಿ.ಜಗದೀಶ್‌
 19. ಎಂ.ಕೂರ್ಮಾರಾವ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು

 1. ಸವಿತಾ ಹಂದೆ
 2. ಎಂ.ಎ.ಸಲೀಂ
 3. ಅಮೃತ್ ಪೌಲ್‌
 4. ಮುರುಗನ್‌
 5. ಡಾ.ಸುಬ್ರಹ್ಮಣ್ಯೇಶ್ವರ ರಾವ್
 6.  ದೇವಜ್ಯೋತಿ ರೇ
 7. ಪ್ರವೀಣ್ ಮಧುಕರ್ ಪವಾರ್
 8. ವೈ.ಎಸ್‌.ರವಿಕುಮಾರ್
 9. ಎಂ.ಬಿ.ಬೋರಲಿಂಗಯ್ಯ
 10. -ರಾಜೇಂದ್ರ ಪ್ರಸಾದ್
 11. ಅಣ್ಣಾಮಲೈ
 12. ಕೆ.ಟಿ.ಬಾಲಕೃಷ್ಣ
 13. ಡಾ.ಸಂಜೀವ್‌ ಎಂ.ಪಾಟೀಲ್‌
 14. ಲಕ್ಷ್ಮಣ ನಿಂಬರಗಿ
 15. ನಿಶಾ ಜೇಮ್ಸ್‌
 16. ಎನ್‌.ವಿಷ್ಣುವರ್ಧನ್‌
 17. ಅಕ್ಷಯ್ ಎಂ.ಹಾಕೆ

ಉಸ್ತುವಾರಿ ಸಚಿವರು

 1. ಜಯಪ್ರಕಾಶ್ ಹೆಗ್ಡೆ
 2. ವಸಂತ ಸಾಲ್ಯಾನ
 3. ರೋಶನ್ ಬೇಗ
 4. ಸುಮಾ ವಸಂತ್
 5. ಮೋಟಮ್ಮ
 6. ಡಿ.ಟಿ.ಜಯಕುಮಾರ್
 7. ಡಾ.ವಿ.ಎಸ್‌.ಆಚಾರ್ಯ
 8. ಕೋಟ ಶ್ರೀನಿವಾಸ ಪೂಜಾರಿ
 9. ವಿನಯಕುಮಾರ್ ಸೊರಕೆ
 10. ಪ್ರಮೋದ್ ಮಧ್ವರಾಜ್
 11.  ಡಾ.ಜಯಮಾಲಾ
 12. ಬಸವರಾಜ ಬೊಮ್ಮಾಯಿ
 13. ಎಸ್‌.ಅಂಗಾರ

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

 1. ರೆಮಿಡಿಯಾ ಡಿಸೋಜಾ
 2. ಕೇಶವ ಕುಂದರ್‌
 3. ಸರಸು ಡಿ.ಬಂಗೇರ
 4. ಅಶೋಕ್‌ ಕುಮಾರ್ ಹೆಗ್ಡೆ
 5. ಭುಜಂಗ ಶೆಟ್ಟಿ
 6. ಡಾ.ಯು.ವನಜಾಕ್ಷಿ
 7. ಬಿ.ಎನ್‌.ಶಂಕರ ಪೂಜಾರಿ
 8. ರಾಜು ಪೂಜಾರಿ
 9. ಎನ್‌.ಬಿ.ಬಾಬು
 10. ಜೆರಾಲ್ಡ್‌ ಫರ್ನಾಂಡಿಸ್
 11. ಗ್ಲಾಡಿಸ್‌ ಡಿ ಅಲ್ಮೆಡಾ
 12. ಕಟಪಾಡಿ ಶಂಕರ ಪೂಜಾರಿ
 13. ಉಪೇಂದ್ರ ನಾಯಕ್‌
 14. ಉದಯ ಕೋಟ್ಯಾನ್
 15. ಸವಿತಾ ಕೋಟ್ಯಾನ್
 16. ದಿನಕರ ಬಾಬು

ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಬೋರ್ಡ್‌ ಹೈಸ್ಕೂಲ್‌ನಿಂದ ರಜತೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುವುದು. 5 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 5ಕ್ಕೆ ರಾಜ್ಯಪಾಲ ಥಾವರ್‌ಚಂದ್ರ ಗೆಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 1997ರ ಅವಧಿಯಲ್ಲಿ ಜಿಲ್ಲೆಯಲ್ಲಿ ಶಾಸಕರಾಗಿದ್ದವರನ್ನು ಹಾಗೂ ಜನಪ್ರತಿನಿಗಳನು ಆಹ್ವಾನಿಸಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿರಲಿದೆ

15 ಸಾವಿರ ಮಂದಿ ಕುಳಿತುಕೊಳ್ಳಲು ಬೃಹತ್ ವೇದಿಕೆ ಸಿದ್ಧಪಡಿಸಲಾಗಿದ್ದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಸಂಸ್ಥೆ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು ಮಳೆಬಂದರೂ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ.


Spread the love