Home Mangalorean News Kannada News ಉಡುಪಿ ರಸ್ತೆಯಲ್ಲಿ ನೋಟ್ ಎಸೆದು ಹೋದ ಯುವಕ, ಹೆಕ್ಕಲು ಮುಗಿಬಿದ್ದ ಜನತೆ!

ಉಡುಪಿ ರಸ್ತೆಯಲ್ಲಿ ನೋಟ್ ಎಸೆದು ಹೋದ ಯುವಕ, ಹೆಕ್ಕಲು ಮುಗಿಬಿದ್ದ ಜನತೆ!

Spread the love

ಉಡುಪಿ ರಸ್ತೆಯಲ್ಲಿ ನೋಟ್ ಎಸೆದು ಹೋದ ಯುವಕ, ಹೆಕ್ಕಲು ಮುಗಿಬಿದ್ದ ಜನತೆ!

ಉಡುಪಿ: ಒಂದೆಡೆ ಲಾಕ್ ಡೌನ್ ಸಮಸ್ಯೆಯಿಂದ ಜನತೆ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಅಚಾನಕ್ ಅಗಿ ಕರೆನ್ಸಿ ನೋಟುಗಳು ರಸ್ತೆಯಲ್ಲಿ ಸಿಕ್ಕರೆ ಹೇಗಾಗಬೇಡ.

ಹೌದು ಸೋಮವಾರ ಬೆಳ್ಳಂಬೆಳಿಗ್ಗೆ ಉಡುಪಿ ಕೃಷ್ಣಮಠದ ಸಮೀಪದ ವಾದಿರಾಜ ರಸ್ತೆಯಲ್ಲಿ ಯುವಕನೋರ್ವ ರೂ 2000, 500, 200 ರ ನೋಟುಗಳನ್ನು ಎಸೆಯುತ್ತಾ ಹೋಗಿದ್ದು ಇದನ್ನು ಕಂಡ ಜನತೆ ಅವುಗಳನ್ನು ಹೆಕ್ಕಲು ಮುಗಿಬಿದ್ದು ಹೋಗಿದ್ದಾರೆ. ಯುವಕನ ಬಗ್ಗೆ ಸಂಶಯಗೊಂಡ ಸ್ಥಳೀಯರು ಯುವಕನನ್ನು ಪ್ರಶ್ನಿಸಲು ಹಿಂಬಾಲಿಸಿದಾಗ ಯುವಕ ಕೂಡಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನೋಟು ಹೆಕ್ಕಿಕೊಂಡ ಜನತೆಯ ಖುಷಿ ಮಾತ್ರ ಕೇವಲ ಕೆಲವೇ ನಿಮಿಷಕ್ಕೆ ಸೀಮಿತವಾಗಿತ್ತು ಏಕೆಂದರೆ ಯುವಕ ಎಸೆದ ನೋಟುಗಳೆಲ್ಲಾ ನಕಲಿಯಾಗಿದ್ದವು.

ನೋಟುಗಳು ನಕಲಿ ಎಂದು ತಿಳಿದು ಬಂದ ಬಳಿಕ ಜನರು ಆ ನೋಟುಗಳನ್ನು ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದು ನಗರ ಠಾಣೆಯ ಪೊಲೀಸರು ಯುವಕ ಪತ್ತೆಗಾಗಿ ಬಲೆ ಬೀಸಿದ್ದಾರೆ. ರಸ್ತೆಯಲ್ಲಿ ಇರುವ ಸಿಸಿ ಟಿವಿಗಳಲ್ಲಿ ಯುವಕನ ಚಹರೆಯನ್ನು ಪತ್ತೆ ಹಚ್ಚುವ ಕೆಲಸವನ್ನು ನಗರ ಠಾಣೆಯ ಪೊಲೀಸರು ಮಾಡುತ್ತಿದ್ದಾರೆ.
ಈ ನಡುವೆ ನೋಟಿನ ಮೂಲಕ ಕೊರೋನಾ ಹಬ್ಬಿಸುತ್ತಾರೆಂಬ ವದಂತಿ ದಟ್ಟವಾಗಿ ಹರಡಿದ್ದು ಇದರಿಂದ ನಾಗರಿಕರು ಬೆಚ್ಚಿಬಿದ್ದಾರೆ.


Spread the love

Exit mobile version