ಉಡುಪಿ : ಲಾಕ್ ಡೌನ್ ನಿಂದ ಸಮಸ್ಯೆಗೊಳಗಾದ ಅಶಕ್ತ ಕುಟುಂಬಗಳ ಸಹಾಯಕ್ಕೆ ನಿಂತ ಮಲಬಾರ್ ಚಾರಿಟೇಬಲ್ ಟ್ರಸ್ಟ್

Spread the love

ಉಡುಪಿ : ಲಾಕ್ ಡೌನ್ ನಿಂದ ಸಮಸ್ಯೆಗೊಳಗಾದ ಅಶಕ್ತ ಕುಟುಂಬಗಳ ಸಹಾಯಕ್ಕೆ ನಿಂತ ಮಲಬಾರ್ ಚಾರಿಟೇಬಲ್ ಟ್ರಸ್ಟ್

ಉಡುಪಿ: ಕೊರೋನಾ ಎರಡನೇ ಅಲೆಯಿಂದಾಗಿ ರಾಜ್ಯ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಬಿಸಿ ತಟ್ಟಿದ್ದು ಹಲವಾರು ಬಡವರು, ಅಶಕ್ತ ಕುಟುಂಬಗಳು ಸಮಸ್ಯೆಯನ್ನು ಅನುಭವಿಸುತ್ತಿದ್ದು ಅಂತಹ ಕುಟುಂಬಗಳಿಗೆ ಉಡುಪಿಯ ಮಲಬಾರ್ ಚಾರಿಟೇಬಲ್ ಟ್ರಸ್ಟ್ ತನ್ನ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

ಜಿಲ್ಲೆಯಾದ್ಯಂತ ಇರುವ ಬಡ ಕುಟುಂಬಗಳಿಗೆ, ಆಶಾ ಕರ‍್ಯರ‍್ತೆಯರಿಗೆ, ಮಂಗಳಮುಖಿಯರು ಸೇರಿದಂತೆ ಸಮಾಜದಲ್ಲಿ ಲೌಕ್ ಡೌನ್ ಅವಧಿಯಲ್ಲಿ ಕೆಲಸವಿಲ್ಲದೆ ಕಷ್ಟಪಡುತ್ತಿರುವವರಿಗೆ ತಮ್ಮ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಸಾವಿರಾರು ಮಂದಿಗೆ ದಿನಸಿ ವಸ್ತುಗಳನ್ನು ಪ್ರತಿನಿತ್ಯ ಎಂಬಂತೆ ವಿತರಿಸುತ್ತಿದ್ದಾರೆ.

ಸುಮಾರು ರೂ 1೦೦೦ ಮೌಲ್ಯದ ಕಿಟ್ ನಲ್ಲಿ ಅಕ್ಕಿ, ಬೇಳೆ, ಹಿಟ್ಟು, ಎಣ್ಣೆ ಸಕ್ಕರೆ ಸೇರಿದಂತೆ ಹಲವಾರು ದಿನಸಿ ಸಾಮಾಗ್ರಿಗಳನ್ನು ಒಳಗೊಂಡಿದ್ದು ಟ್ರಸ್ಟ್ ವತಿಯಿಂದ ಈಗಾಗಲೇ ಸುಮಾರು 3೦೦೦ ಕ್ಕೂ ಅಧಿಕ ಕಿಟ್ ಗಳನ್ನು ವಿತರಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟ್ರಸ್ಟಿನ ಚಾರಿಟಿ ಉಸ್ತುವಾರಿ ತಂಝೀಮ್ ಅವರು ನಮ್ಮ ಸಂಸ್ಥೆಯ ಮುಖ್ಯಸ್ಥರ ಆಸೆಯಂತೆ ಸಿಎಸ್ ಆರ್ ಹಣವನ್ನು ಸಂಪರ‍್ಣವಾಗಿ ಅಗತ್ಯವಿರುವವರಿಗೆ ರ‍್ಚು ಮಾಡಬೇಕು ಈ ಮೂಲಕ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎನ್ನುವುದಾಗಿದೆ. ಟ್ರಸ್ಟ್ ಈಗಾಗಲೇ ಹಲವಾರು ಜನಪರ ಕೆಲಸಗಳಿಗೆ ಸಹಾಯ ನೀಡುತ್ತಿದ್ದು, ಬಡವರ ಮನೆ ನರ‍್ಮಾಣ, ಆರೋಗ್ಯ ಸಮಸ್ಯೆಗೆ ಸ್ಪಂದನೆ, ಬಡ ಹುಡುಗಿಯರ ಮದುವೆಗೆ ಸಹಾಯ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ನೋವಿನಲ್ಲಿ ಇರುವವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಸದ್ಯ ಕೊರೋನಾ ಮಹಾಮಾರಿಯಿಂದಾಗಿ ಬಡ ಜನರು ಸೂಕ್ತ ಕೆಲಸವಿಲ್ಲದೆ ಪರದಾಡುತ್ತಿದ್ದಾಋಎ. ದಿನನಿತ್ಯ ದುಡಿದು ದಿನದ ಕೊನೆಯಲ್ಲಿ ಸಂಬಳ ತೆಗೆದುಕೊಂಡು ಜೀವನ ನಡೆಸುತ್ತಿರುವವರಿಗೆ ಈಗ ಆದಾಯವಿಲ್ಲವಾಗಿದೆ. ಅಂತಹವರಿಗೆ ಸದ್ಯದ ಪರಿಸ್ಥಿತಿ ಸುಧಾರಿಸುವವರೆಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ. ಆದ್ದರಿಂದ ಟ್ರಸ್ಟ್ ವತಿಯಿಂದ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ವರ್ಗದ ಜನರಿಗೆ ೩೦೦೦ಕ್ಕೂ ಅಧಿಕ ಕಿಟ್ ಗಳನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ ಎಂದರು.


Spread the love