
ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ, ಸಂತ್ರಸ್ಥೆಯ ರಕ್ಷಣೆ!
ಉಡುಪಿ: ನಗರದ ಶಾಂಭವಿ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಉಡುಪಿ ನಗರ ಮಹಿಳಾ ಠಾಣಾ ಪೊಲೀಸರು ಬೇಧಿಸಿದ್ದು ಇಬ್ಬರನ್ನು ಬಂಧಿಸಿ ಸಂತ್ರಸ್ಥೆಯನ್ನು ರಕ್ಷಣೆಯ ಮಾಡಿದ್ದಾರೆ.
ಬಂಧಿತರನ್ನು ಎರ್ಮಾಳ್ ನಿವಾಸಿ ಜಯಂತ್ ಸಾಲಿಯಾನ್ (46) ಮತ್ತು ಹೆಬ್ರಿ ನಾಡ್ಪಾಲು ನಿವಾಸಿ ದಿನೇಶ್ (42) ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ 1 ಗಂಟೆಗೆ ಉಡುಪಿ ಹಳೆ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಶಾಂಭವಿ ಹೋಟೇಲ್ ನಲ್ಲಿ ವೇಶ್ಯಾವಾಟಿಕೆಯನ್ನು ಜಯಂತ್ ಸಾಲಿಯಾನ್ ಮತ್ತು ದಿನೇಶ್ ಎಸ್ ಇವರನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಸಂಬಂದಿಸಿದ 4 ಮೊಬೈಲ್ ಪೋನ್ , 5,600 /- ರೂಪಾಯಿ ನಗದು, ಹಾಗೂ ಇತರೆ ಸಾಕ್ಷ್ಯ ಸ್ವತ್ತು ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಶೇಖರ್, ಜಯಂತ್ ಮತ್ತು ದಿನೇಶ್ ಇವರು ಸೇರಿಕೊಂಡು ನೊಂದ ಮಹಿಳೆಯನ್ನು ಲಾಡ್ಜ್ ನ ರೂಮಿನಲ್ಲಿರಿಸಿ ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸಿ ವೇಶ್ಯಾವಾಟಿಕೆ ಯಿಂದ ಗಳಿಸದ ಹಣದಿಂದ ಜೀವನ ನಡೆಸುತ್ತಿರುವುದು ಹಾಗೂ ಎಲ್ಲಾ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.