
ಉಡುಪಿ ವಿಡೀಯೊ ಪ್ರಕರಣ ಎಸ್ ಐ ಟಿ ಗೆ ನೀಡಲು ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ಕಾಲೇಜು ಘಟನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ ಸಿಎಂ ತರಾತುರಿಯಲ್ಲಿ ಸಭೆ ಮೊಟಕು ಮಾಡಿ ವಾಪಾಸ್ ಹೋಗಿದ್ದು, ಘಟನೆ ಬಗ್ಗೆ ಯಾವುದೇ ಮಾಹಿತಿಯನ್ನೂ ಪಡೆಯಲಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಐದಕ್ಕೈದು ಬಿಜೆಪಿ ಶಾಸಕರಿರೋದನ್ನು ಅವರಿಗೆ ಸಹಿಸಲು ಆಗಲಿಲ್ಲ ಆರೋಗ್ಯ ಶಿಕ್ಷಣ ಇಲಾಖೆಯನ್ನು ಲೇವಡಿ ಮಾಡಿ ವಾಪಾಸ್ಸಾದರು ಉಡುಪಿ ವಿಡಿಯೋ ಬಗ್ಗೆ ಎಸ್ಐಟಿ ತನಿಖೆ ನಡೆಸಬೇಕು. ಈ ಕುರಿತು ಅಗಸ್ಟ್ 4 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.
ಘಟನೆಯಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಸರಕಾರ ಫ್ರೀ ಹ್ಯಾಂಡ್ ಬಿಟ್ಟಿಲ್ಲ ಆರೋಪಿಗಳಿಗೆ ಜಾಮೀನು ಸಿಗುವ ಸೆಕ್ಷನ್ ಹಾಕಲಾಗಿದ್ದು, ಬೆಳ್ಳಿಯಪ್ಪನವರ ಮೇಲೆ ವಿಶ್ವಾಸ ಇದೆ ನ್ಯಾಯ ಕೊಡುತ್ತಾರೆ. ರಾಜ್ಯಪಾಲರಿಗೆ ಎಲ್ಲಾ ದಾಖಲೆ ನೀಡಿ, ಎಸ್ ಐಟಿಗೆ ನೀಡುವಂತ ಆಗ್ರಹ ಮಾಡುತ್ತೇವೆ. ಕಾಲೇಜು ವಿದ್ಯಾರ್ಥಿಗಳು ಘಟನೆ ಬಗ್ಗೆ ಮನವಿ ಮಾಡಿದ್ದಾರೆ ಮನೆಯವರು ನನಗೆ ಮನವಿ ಪತ್ರ ನೀಡಿದ್ದಾರೆ ಅದನ್ನು ಪೊಲೀಸರಿಗೆ ನೀಡಿದ್ದೇನೆ ಎಂದರು.
ಕಾಲೇಜು ಅಡ್ಮಿನ್ ಖಾದರ್ ಬಗ್ಗೆ ವಿದ್ಯಾರ್ಥಿಗಳು ಆರೋಪ ಮಾಡಿದ್ದು, ಮಾರ್ಕ್ಸ್ ಕಾರ್ಡ್ ಕೂಡಾ ತೆಗೆದಿಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಆರೋಪಿಗಳಿಗೆ ಶಿಕ್ಷೆ ಆಗಬೇಕು, ಆರೋಪಿಗಳ ಪೋಷಕರು ಪಿಎಫ್ ಐ ನಲ್ಲಿ ಸಕ್ರೀಯ ಎಂಬ ಮಾಹಿತಿಯಿದ್ದು, ಪಿಎಫ್ ಐ ಮಹಿಳಾ ವಿಂಗ್ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಮಾಡಿದ್ದೇವೆ. ವಿದ್ಯಾರ್ಥಿನಿಯರ ಪೋಷಕರು ಪಿಎಫ್ ಐಯಲ್ಲಿ ಸಕ್ರೀಯ ಇದ್ದಾರೆ ಎಂಬ ಮಾಹಿತಿ ಇದ್ದು, ರಾಜ್ಯ ಸರಕಾರ ಜಿಹಾದಿಗಳಿಗೆ ನೇರವಾಗಿ ಸಹಕಾರ ನೀಡುತ್ತಿದೆ. ಸರಕಾರ ಮುಸ್ಲಿಂ ಓಟ್ ಬ್ಯಾಂಕ್ ತುಷ್ಟೀಕರಣ ಮಾಡುತ್ತಿದ್ದು, ಬಾಂಬ್ ಬ್ಲ್ಯಾಸ್ಟ್ ಮಾಡಿದವರನ್ನು ಟೆರರಿಸ್ಟ್ ಗಳು ಎಂದು ಹೇಳಲು ತಯಾರಿಲ್ಲ. ರಾಜಕೀಯಕ್ಕಾಗಿ ದೇಶವನ್ನು ಮಾರಲು ತಯಾರಿದ್ದಾರೆ. ದರೋಡೆ, ದನಕಳ್ಳರು ಬಂದರೂ ಅವರನ್ನು ಕಾಂಗ್ರೆಸ್ ಬಿಟ್ಟುಹಾಕಲ್ಲ ಎಂದರು
ಆರೋಪಿ ವಿದ್ಯಾರ್ಥಿನಿಯರ ಪೋಷಕರು ಡಿವೈಎಸ್ ಪಿ ಜೊತೆ ಮಾತನಾಡಿದ್ದು, ಸಿಸಿಟಿವಿ ಫೂಟೇಜ್ ತೆಗೆಯಲು ಹೇಳಿದ್ದಾರೆ. ಇಬ್ಬರು ಮುಸಲ್ಮಾನ ಯುವಕರು ಬೈಕಲ್ಲಿ ಕಾಲೇಜಿಗೆ ಬರುತ್ತಿದ್ದರು ಮೊಬೈಲ್ ಬದಲಾಯಿಸುತ್ತಿದ್ದರು ಎಂದಿದ್ದಾರೆ. ಶೋಭಾ ಕರಂದ್ಲಾಜೆ ಮುಂದೆ ಎಸ್ ಪಿ ಡಿಸಿಯವರಿಗೂ ಈ ಮಾಹಿತಿ ನೀಡಿದ್ದೇವೆ. ಮೂವರು ವಿದ್ಯಾರ್ಥಿಗಳ ಮನೆಯವರ ತನಿಖೆ ಆಗಬೇಕು ಎಂದರು.
ಮಹಿಳಾ ಪ್ರತಿಭಟನಾ ಕಾರರ ವಿರುದ್ಧ ಅವಹೇಳನಾಕಾರಿ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಎಸ್ ಪಿ ಸಮ್ಮುಖದಲ್ಲೇ ಸೆನ್ ನಲ್ಲಿ ಕೇಸ್ ಮಾಡಿದ್ದು, ಪಾಸ್ ಪೋರ್ಟ್ ಸೀಜ್ ಮಾಡುವಂತೆ ಒತ್ತಾಯಿಸಿದ್ದೇವೆ. ದುಬೈನಲ್ಲಿ ಇದ್ದು ಫೇಕ್ ಐಡಿ ಕ್ರಿಯೇಡ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ ಆಗಸ್ಟ್ 3 ವಿಹಿಂಪ ಭಜರಂಗದಳ ಪ್ರತಿಭಟನೆಗೆ ಕರೆ ನೀಡಿದೆ ಪ್ರತಿಭಟನೆಗೆ ಬಿಜೆಪಿ ಪಕ್ಷ ಕೂಡಾ ಬೆಂಬಲ ನೀಡಿದೆ. ಪರಿವಾರ ಸಂಘಟನೆಗಳು ಭಾಗಿಯಾಗಿ ಪ್ರತಿಭಟಿಸಲಿದೆ ಎಂದರು.