ಉಡುಪಿ: ವಿನಾಶಕಾರಿ ಮೀನುಗಾರಿಕೆ ಪದ್ಧತಿ ನಡೆಸದಂತೆ ಸೂಚನೆ
ಉಡುಪಿ: ರಾಜ್ಯ ಸರ್ಕಾರವು ಈ ಕೆಳಕಂಡ ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ನಿಷೇಧಿಸಿ, ಆದೇಶ ಹೊರಡಿಸಿರುತ್ತದೆ.
ಬುಲ್ ಟ್ರಾಲಿಂಗ್ ಮೀನುಗಾರಿಕೆ, ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯ ವಸ್ತುಗಳನ್ನು/ ಪದಾರ್ಥಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಗರಿಷ್ಟ 350 ಅಶ್ವ ಶಕ್ತಿ ಇಂಜಿನ್ ಅಳವಡಿಸಲು ಅನುಮತಿಸಲಾಗಿದೆ. ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಕಡ್ಡಾಯವಾಗಿ ಏಕರೂಪದ ಬಣ್ಣಹಚ್ಚಲು ಸೂಚಿಸಲಾಗಿದೆ. ಎಲ್ಲಾ ಟ್ರಾಲ್ ಮೀನುಗಾರಿಕೆ ದೋಣಿಗಳಿಗೆ ಕಡ್ಡಾಯವಾಗಿ 35 ಎಂ.ಎಂ ಅಳತೆಯ ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಲೆಯನ್ನು ಉಪಯೋಗಿಸುವುದು ಕಡ್ಡಾಯವಾಗಿದೆ. ಎಲ್ಲಾ ಪರ್ಸೀನ್ ಮತ್ತು ಔಟ್ ಬೋರ್ಡ್ ಇಂಜಿನ್ ಅಳವಡಿಸಿದ ಮೀನುಗಾರಿಕೆ ದೋಣಿಗಳು ಕಡ್ಡಾಯವಾಗಿ 20 ಎಂಎಂ ಅಳತೆಗಿಂತ ಸಣ್ಣ ಕಣ್ಣಿನ ಬಲೆಗಳನ್ನು ಉಪಯೋಗಿಸಬಾರದು. ಕರಾವಳಿ ತೀರ ಪ್ರದೇಶದಲ್ಲಿ ಪಚ್ಚಿಲೆ (ಗ್ರೀನ್ ಮಸಲ್) ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಟ್ಟು 19 ಜಾತಿಯ ಮೀನುಗಳ ಹಿಡುವಳಿಯನ್ನು ಕನಿಷ್ಟ ಕಾನೂನಾತ್ಮಕ ಗಾತ್ರ ನಿಗದಿಪಡಿಸಿ ಸರ್ಕಾರ ಆದೇಶಗೊಳಿಸಿದೆ.