ಉಡುಪಿ: ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ – ಪ್ರಕರಣ ದಾಖಲು

Spread the love

ಉಡುಪಿ: ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ – ಪ್ರಕರಣ ದಾಖಲು

ಉಡುಪಿ: ಯಾವುದೇ ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಶ್ವೇತಾ ಎಂಬವರು ಸಿಟಿ ಬಸ್ ನಿಲ್ದಾಣದ ಬಳಿ ಶಾಶ್ವತ್ ಡೆಂಟಲ್ ಕ್ಲಿನಿಕ್ & ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ನವೀಕರಣವನ್ನು ಮಾಡಿದ್ದು ಅದರೆ ಶ್ವೇತಾ ಅವರು ಕ್ಲಿನಿಕ್ನ್ನು ನಡೆಸದೆ, ಯಾವುದೇ ವೈದ್ಯಕೀಯ ಪದವಿ ಹೊಂದಿರದ ಗೋವಿದಂಭಂಡಾರಿ ಇವರು ನಕಲಿ ದಂತ ವೈದ್ಯನಾಗಿ ಸದ್ರಿ ಕ್ಲಿನಿಕ್ನ್ನು ನಡೆಸುತ್ತಿದ್ದು ಅಕ್ಟೊಭರ್ 21ರಂದು ಅರೋಗ್ಯ ಇಲಾಖೆ ವತಿಯಿಂದ ಕ್ಲಿನಿಕ್ನ್ನು ಸೀಲ್ ಮಾಡಲಾಗಿರುತ್ತದೆ.

ಅರೋಪಿತರು ಸಮಾನ ಉದ್ದೇಶದಿಂದ ಸಾರ್ವಜನಿಕರನ್ನು ವಂಚಿಸಿ ಅರೋಗ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಅಪರಾಧಿಕ ನಂಬಿಕೆ ದ್ರೋಹ ವೆಸಗಿ, ವಂಚನೆ ಮಾಡಿರುತ್ತಾರೆ, ಎಂಬುದಾಗಿ ಡಾ|| ನಾಗರತ್ನ ತಾಲೂಕು ಆರೋಗ್ಯ ಅಧಿಕಾರಿ, ಉಡುಪಿ ಇವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love