ಉಡುಪಿ: ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣು ಬಿಗಿದು ಕೊಂಡು ಆತ್ಮಹತ್ಯೆ

Spread the love

ಉಡುಪಿ: ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣು ಬಿಗಿದು ಕೊಂಡು ಆತ್ಮಹತ್ಯೆ

ಉಡುಪಿ: ವಿಚಾರಾಣಾಧೀನ ಕೈದಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಸಮೀಪದ ಸಬ್ ಜೈಲ್ ನಲ್ಲಿ ಭಾನುವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಸದಾನಂದ ಸೇರಿಗಾರ್ ಎಂದು ಗುರುತಿಸಲಾಗಿದೆ.

ಕೈದಿ ಸದಾನಂದ ಸೇರಿಗಾರ್ ಜೈಲಿನಲ್ಲಿ 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿಯೇ ಬೆಳಿಗ್ಗೆ ಸುಮಾರು 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದನ್ನು ಗಮನಿಸಿದ ಇತರ ಕೈದಿಗಳು ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದು ದಾರಿ ಮಧ್ಯೆ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಕೈದಿ ಸದಾನಂದ ಸೇರಿಗಾರ್ ಇತ್ತೀಚೆಗೆ ಆನಂದ ದೇವಾಡಿಗ ಎಂಬಾತನನ್ನು ಬೈಂದೂರು ತಾಲೂಕಿನ ಹೇನ್ ಬೇರು ಸಮೀಪದ ಅರಣ್ಯ ಇಲಾಖೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಸಜೀವವಾಗಿ ಸುಟ್ಟು ಹಾಕಿದ್ದರು. ಮಲೆಯಾಳಂನ ಕುರುಪ್ ಸಿನಿಮಾದ ಅಪರಾಧ ಕೃತ್ಯಗಳಿಂದ ಪ್ರೇರೆಪಣೆಗೊಂಡು ಆನಂದ ದೇವಾಡಿಗ ಎಂಬಾತನನ್ನು ತನ್ನ ಸಹೋದರ, ಹಾಗೂ ಆಪ್ತರು ಸೇರಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಲು ಪ್ರಯತ್ನಿಸಿ ಬಳಿಕ ಜೈಲು ಪಾಲಾಗಿದ್ದ


Spread the love