ಉಡುಪಿ ಸಿಟಿ ಸೆಂಟರ್ ಮಾಲ್ಗೆ `ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ ಮರುನಾಮಕರಣ
ಉಡುಪಿ: ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್ ಅವರ ಪೂರ್ಣಪ್ರಮಾಣದ ಬೆಂಬಲದೊAದಿಗೆ ಉಡುಪಿ ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಸಿಟಿ ಸೆಂಟರ್ ಮಾಲ್ ಅನ್ನು `ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ ಎಂಬುದಾಗಿ ಮರು ನಾಮಕರಣ ಮಾಡಲಾಗಿದೆ ಎಂದು ಸಿಟಿ ಸೆಂಟರ್ ಮಾಲಕ ಜಮಾಲುದ್ದೀನ್ ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018 ರಲ್ಲಿ ಕೋಡಿ ಇಬ್ರಾಹಿಂ ಮೊಹಮ್ಮದ್ ಸಿಟಿ ಸೆಂಟರ್ ಮಾಲ್ಗೆ ಬೃಹತ್ ಮೊತ್ತದ ಹೂಡಿಕೆ ಮಾಡಿದ್ದು, ಇದೀಗ ಈ ಮಾಲ್ನಲ್ಲಿ ಪೂರ್ಣಪ್ರಮಾಣದ ಬೆಂಬಲವನ್ನು ನೀಡಿ ಅಭಯ ಹಸ್ತವನ್ನು ನೀಡಿದ್ದಾರೆ. ಈ ಮೂಲಕ ಸಿಟಿ ಸೆಂಟರ್ ಮಾಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.
ಟಿಪ್ಟಾಪ್ ಸಿಟಿ ಸೆಂಟರ್ ಮಾಲ್ನ್ನು ಅತ್ಯುತ್ತಮ ವ್ಯಾಪಾರ ವಹಿವಾಟಿನ ಕೇಂದ್ರವಾಗಿ ಬೆಳೆಸಲು ಕಟ್ಟಿಬದ್ಧರಾಗಿದ್ದು, ಕೋಡಿ ಇಬ್ರಾಹಿಂ ಮೊಹಮ್ಮದ್ ಮಾಲ್ನ್ನು ಪ್ರಗತಿ ಪಥದಲ್ಲಿ ದೀರ್ಘ ಕಾಲ ನಡೆಸಿಕೊಂಡು ಹೋಗಲು ನಾವು ಜೊತೆಯಾಗಿ ಸಾಗಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಕೋಡಿ ಇಬ್ರಾಹಿಂ ಮೊಹಮ್ಮದ್ ನಮ್ಮೊಂದಿಗೆ ಕೈಜೋಡಿಸಿದ ಕಾರಣ ಈ ಮಾಲ್ ಸರ್ವತೋಮುಖ ಬೆಳವಣಿಗೆ ಕಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್ ಮಾತನಾಡಿ, ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವು ಒಂದಾಗಿ ಈ ಮಾಲ್ನ್ನು ಹೊಸ ರೀತಿಯಲ್ಲಿ ಮುನ್ನಡೆಸಲಿದ್ದೇವೆ. ಆ ಮೂಲಕ ಈ ಮಾಲ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಸಿಟಿ ಸೆಂಟರ್ ಮಾಲ್ನ ಮೆನೇಜರ್ ರಾಧಾಕೃಷ್ಣ ಪ್ರಭು, ಬ್ಯುಸಿನೆಸ್ ಹೆಡ್ ಹನೀಫ್ ಮುಹಮ್ಮದ್, ಉದ್ಯಮಿ ಮುಸ್ತಕ್ ಉಪಸ್ಥಿತರಿದ್ದರು