ಉದಯ್ ಗಾಣಿಗ ಕೊಲೆ ಪ್ರಕರಣ: ಆರೋಪಿ ಬಿಜೆಪಿ ಪ್ರಭಾವಿ ಮುಖಂಡ ಬಾಲಚಂದ್ರ ಭಟ್ ವಶ?

Spread the love

ಉದಯ್ ಗಾಣಿಗ ಕೊಲೆ ಪ್ರಕರಣ: ಆರೋಪಿ ಬಿಜೆಪಿ ಪ್ರಭಾವಿ ಮುಖಂಡ ಬಾಲಚಂದ್ರ ಭಟ್ ವಶ?

ಕುಂದಾಪುರ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಬಿಜೆಪಿ ವಲಯದ ಪ್ರಭಾವಿ ಮುಖಂಡ ಬಾಲಚಂದ್ರ ಭಟ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ‌ ತಿಳಿದು ಬಂದಿದೆ.

ಬೋರ್ ವೆಲ್ ಪರವಾನಿಗೆ ವಿಚಾರದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಹಾಗೂ ಉದಯ್ ನಡುವೆ ಸಾಕಷ್ಟು ಗಲಾಟೆ ನಡೆದಿತ್ತು. ಇತ್ತೀಚೆಗಷ್ಟೇ ಗ್ರಾಮ ಸೀಲ್ ಡೌನ್ ನೆಪದಲ್ಲಿ ಜನಸಾಮನ್ಯರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ಉದಯ್ ಪಂಚಾಯತ್ ಆಡಳಿತದ ಸರ್ವಾಧಿಕಾರಿ‌ ಧೋರಣೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆಹಗಳನ್ನು ಪ್ರಕಟಿಸಿ ಆಡಳಿತ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವಿಚಾರವಾಗಿ ಪೂರ್ವದ್ವೇಷದಿಂದ ಕಾರು ಹತ್ತಿಸಿ ಕೊಲೆಗೈಯ್ಯಲಾಗಿದೆ ಎಂದು ಮೃತ ಉದಯ್ ಪತ್ನಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ‌ ಮೇರೆಗೆ ತನಿಖೆ ಚುರುಕುಗೊಳಿಸಿದ‌ ಪೊಲೀಸರು ಪ್ರಮುಖ‌ ಆರೋಪಿ ಪ್ರಾಣೇಶ್ ಯಡಿಯಾಳ್ ನನ್ನು ಬಂಧಿಸಿದ್ದರು. ಇದೀಗ ಪ್ರಕರಣದ ಮೂರನೇ ಆರೋಪಿ ಬಾಲಚಂದ್ರ ಭಟ್ ಎಂಬಾತನನ್ನು ಉಡುಪಿಯ ಬಿಜೆಪಿ ಮುಖಂಡರ ಫ್ಲ್ಯಾಟ್ ಒಂದರಲ್ಲಿ‌ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಬಲ್ಲಮೂಲಗಳಿಂದ‌ ತಿಳಿದು ಬಂದಿದೆ.

ಕೊಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು ಅವರೆಲ್ಲರ ಪತ್ತೆಗೆ ಬಲೆಬೀಸಿದ್ದಾರೆ.


Spread the love

1 Comment

Comments are closed.